ADVERTISEMENT

75 ವರ್ಷಗಳ ಹಿಂದೆ: ಹಿಂದೂ ಕೋಡ್‌ ಮಸೂದೆ ಬಗ್ಗೆ ಬಿಸಿಬಿಸಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 23:30 IST
Last Updated 14 ಡಿಸೆಂಬರ್ 2025, 23:30 IST
   

ನವದೆಹಲಿ, ಡಿ. 14– ಪಾರ್ಲಿಮೆಂಟ್‌ ಹಿಂದೂ ಕೋಡ್‌ ಮಸೂದೆಯನ್ನು ಈ ದಿನ ನಲವತ್ತು ನಿಮಿಷಗಳ ಕಾಲ ಚರ್ಚಿಸಿತು. ಒಂದು ಘಟ್ಟದಲ್ಲಿ ವಾಗ್ಯುದ್ಧವಾಗಿ ಪರಿಣಮಿಸುವಂತೆ ತೋರಿದ ಮಸೂದೆಯ ಚರ್ಚೆಯನ್ನು ಮುಂದೆ ಸರ್ಕಾರ ಗೊತ್ತು ಮಾಡುವಂತೆ ಬಡ್ಜೆಟ್‌ ಅಧಿವೇಶನದಲ್ಲಾಗಲೀ, ವಿಶೇಷ ಅಧಿವೇಶನದಲ್ಲಾಗಲೀ ಚರ್ಚಿಸಬಹುದು.

‘ಈ ಸಭೆಯಲ್ಲಿ ನಡೆಯುತ್ತಿರುವ ಪ್ರಕರಣಗಳು ಪುನಃ ಸಂಭವಿಸಬೇಕೆಂಬುದು ನನ್ನ ಇಚ್ಛೆಯಲ್ಲ. ಈ ಮಸೂದೆ ಚರ್ಚೆಗೆ ಬಂದಾಗಲೆಲ್ಲ ಅದನ್ನು ಮುಂದೆ ಹಾಕಬೇಕೆಂದು ಯಾರಾದರೊಬ್ಬರು ಸದಸ್ಯರು ನಿರ್ಣಯ ಮಂಡಿಸುತ್ತಾರೆ. ಇದು ನಿಲ್ಲಬೇಕು’ ಎಂದು ನ್ಯಾಯಾಂಗ ಸಚಿವ ಬಿ.ಆರ್. ಅಂಬೇಡ್ಕರ್ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT