ಹುಬ್ಬಳ್ಳಿ, ಜುಲೈ 8– ಶಹರದ ಡೌನ್‌ಚಾಳ ಪ್ರದೇಶದ ಸೇಂಟ್ ಜಾನ್ಸ್ ಲೂಥರಾನ್ ಚರ್ಚ್‌ನಲ್ಲಿ ಇಂದು ನಸುಕಿನ ಜಾವ ಬಾಂಬ್ ಸ್ಫೋಟ ಸಂಭವಿಸಿದ್ದರಿಂದ ಹಿಂಸಾಚಾರ ಭುಗಿಲೆದ್ದು, ಬಸ್ಸುಗಳಿಗೆ ಬೆಂಕಿ ಮತ್ತು ಕಲ್ಲು ತೂರಾಟ ಘಟನೆಗಳು ನಡೆದಿವೆ.
ಹಿಂಸಾಚಾರದಲ್ಲಿ ಸಾರಿಗೆ ಸಂಸ್ಥೆಯ 5 ಬಸ್ಸು, 4 ಕಾರು, 6 ಲಾರಿ ಸೇರಿದಂತೆ ಒಟ್ಟು 15 ವಾಹನಗಳು ಹಾನಿಗೀಡಾಗಿದ್ದು, ಬಸ್ಸಿನ ಚಾಲಕ, ನಿರ್ವಾಹಕ ಸೇರಿ ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ.
ಸಾರಿಗೆ ಸಂಸ್ಥೆಯ ಎರಡು ಬಸ್ಸುಗಳಿಗೆ ಬೆಂಕಿ ಹಚ್ಚಲಾಗಿದ್ದು, ಇತರ ಬಸ್ಸುಗಳು, ಭೂಸೇನಾ ನಿಗಮದ ಟ್ರಕ್, ಕಾರುಗಳು ಸೇರಿದಂತೆ ಇತರ 13 ವಾಹನಗಳಿಗೆ ಕಲ್ಲೆಸೆದು ಗಾಜುಗಳನ್ನು ಪುಡಿ ಪುಡಿ ಮಾಡಲಾಗಿದೆ.
ತುಮಕೂರು, ಜುಲೈ 8– ಕಳ್ಳಂಬೆಳ್ಳ ಬಳಿಯ ಜುಂಜುರಾಯನಹಳ್ಳಿ ಗೇಟ್ ಬಳಿ ಇಂದು ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 4 ಮಂದಿ ಮೃತಪಟ್ಟು, ಇತರ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಹುಳಿಯಾರ್‌ನ ಗೋವಿಂದಪ್ಪ (24), ಶಂಕರಪ್ಪ (26), ಎಲೆಯೂರಿನ ತಿಪ್ಪೇಸ್ವಾಮಿ (24) ಮತ್ತು ಮಾದನಹಳ್ಳಿಯ ಏಕಾಂತಪ್ಪ (22) ಎಂಬುವರು ಸ್ಥಳದಲ್ಲೇ ಮೃತಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.