ADVERTISEMENT

50 ವರ್ಷಗಳ ಹಿಂದೆ | ಸಿನಿಮಾ: ಹಿಂಸೆಗೆ ಪ್ರಾಶಸ್ತ್ಯ ವಿರುದ್ಧ ಸೆನ್ಸಾರ್‌ ಕಣ್ಣು

ಶುಕ್ರವಾರ, 17–7–1970

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 19:45 IST
Last Updated 16 ಜುಲೈ 2020, 19:45 IST

ಚಲನಚಿತ್ರಗಳಲ್ಲಿ ಕಾಮ,ಹಿಂಸೆಗೆ ಅಯುಕ್ತ ಪ್ರಾಶಸ್ತ್ಯವಿರುದ್ಧ ಸೆನ್ಸಾರ್‌ ಕಣ್ಣು
ಮುಂಬಯಿ, ಜುಲೈ 16–
ಕಾಮ ಮತ್ತು ಹಿಂಸೆಗೆ ಅಯುಕ್ತ ಪ್ರಾಶಸ್ತ್ಯ ನೀಡುವಂತಹ ಭಾರತೀಯ ಚಲನಚಿತ್ರಗಳ ಬಗೆಗೆ ಕಟ್ಟುನಿಟ್ಟಾದ ಧೋರಣೆ ಅನುಸರಿಸಲು ಸರ್ಕಾರ ನಿರ್ಧರಿಸಿದೆಯೆಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಶಾಖೆ ಸಚಿವ ಶ್ರೀ ಸತ್ಯನಾರಾಯಣ ಸಿನ್ಹಾ ಅವರು ಇಂದು ತಿಳಿಸಿದರು.

ತಮ್ಮ ಸಂಪುಟಕ್ಕೆ ಸೇರಿದ ಸಂಸತ್‌ ಸದಸ್ಯರ ಸಮಾಲೋಚಕ ಸಮಿತಿಯ ಎರಡು ದಿನಗಳ ಸಭೆಯ ಪ್ರಾರಂಭದಲ್ಲಿ ಮಾತನಾಡಿದ ಸಚಿವರು, ಸೆನ್ಸಾರ್‌ ಮಾಡುವಾಗ ಅಂತಹ ದೃಶ್ಯಗಳನ್ನು ‘ನಿರ್ದಯೆಯಿಂದ’ ಕಿತ್ತುಹಾಕಬೇಕೆಂದು ಸೆನ್ಸಾರ್‌ ಮಂಡಳಿಗೆ ಸೂಚನೆ ಕೊಟ್ಟಿರುವುದಾಗಿ ಹೇಳಿದರು.

ಸೆನ್ಸಾರ್‌ಷಿಪ್‌ ಬಗೆಗೆ ಖೋಸ್ಲಾ ಸಮಿತಿ ವರದಿ ಪರಿಶೀಲಿಸಲು ಸಮಿತಿಯು ಮುಂಬಯಿಯಲ್ಲಿ ಸಭೆ ಸೇರಿದೆ.

ADVERTISEMENT

‘ಪ್ರಧಾನಿ ವಿರುದ್ಧ ಪ್ರದರ್ಶನ ಬೇಡ’
ಬೆಂಗಳೂರು, ಜುಲೈ 16–
ಪ್ರಧಾನಿಶ್ರೀಮತಿ ಇಂದಿರಾ ಗಾಂಧಿಯವರ ರಾಜ್ಯ ಪ್ರವಾಸದ ಸಮಯದಲ್ಲಿ ಪ್ರತಿಭಟನೆ ಅಥವಾ ಪ್ರದರ್ಶನ ನಡೆಸದಿರುವಂತೆ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.