
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ನವದೆಹಲಿ, ಫೆ. 16– ರಾಷ್ಟ್ರದಲ್ಲಿ ಇರುವ ‘ತುಂಟರನ್ನು ಮತ್ತು ಭಯೋತ್ಪಾದಕರನ್ನು’ ಅಡಗಿಸುವ ಸಲುವಾಗಿ ಉಗ್ರ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂಬುವುದಾಗಿ ಗೃಹ ಸಚಿವ ಸಿ. ರಾಜಗೋಪಾಲಾಚಾರಿ
ಅವರು ಇಂದು ಕರೆಕೊಟ್ಟರು. ಮುನ್ನೆಚ್ಚರಿಕೆ ಸ್ಥಾನಬದ್ಧತೆ (ತಿದ್ದುಪಡಿ) ಮಸೂದೆಯನ್ನು ಕುರಿತ ಚರ್ಚೆಗೆ ಪಾರ್ಲಿಮೆಂಟಿನಲ್ಲಿ ಉತ್ತರ ಕೊಡುತ್ತ ಈ ರೀತಿ ನುಡಿದರು.
ಜನತೆಗೆ ಕಮ್ಯುನಿಸ್ಟರನ್ನು ಕಂಡರೆ ಆಗದು. ಕಾಳಸಂತೆಕೋರರನ್ನು ಕಂಡರೆ ದ್ವೇಷ. ಸಾರಿಗೆ ಅಥವಾ
ಸರಬರಾಜುಗಳಿಗೆ ಅಡ್ಡಪಡಿಸುವವರನ್ನು ಕಂಡರೂ ದ್ವೇಷವೇ. ಕೋಮು ಕೋಮುಗಳ ಮಧ್ಯೆ ಬೆಂಕಿ ಹಚ್ಚಿ ದ್ವೇಷದ ಜ್ವಾಲೆಯನ್ನು ಹಬ್ಬಿಸುವವರನ್ನು ಕಂಡರೂ ಜನತೆಗೆ ಆಗದು’ ಎಂಬುದಾಗಿ ಗೃಹ ಸಚಿವ ರಾಜಗೋಪಾಲಾಚಾರಿ ಅವರು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.