ADVERTISEMENT

75 ವರ್ಷಗಳ ಹಿಂದೆ: ಹೋಟೆಲ್‌ಗಳ ಬೋರ್ಡಿನಲ್ಲಿ ಜಾತಿ ಸೂಚಕಗಳು ರದ್ದಾಗಲಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 23:30 IST
Last Updated 27 ಅಕ್ಟೋಬರ್ 2025, 23:30 IST
   

ಬೆಂಗಳೂರು, ಅ. 27– ಮೇಯೊ ಹಾಲಿನಲ್ಲಿ ಗುರುವಾರ ಸೇರಿದ್ದ ಕಾರ್ಪೊರೇಷನ್ ಸಾಮಾನ್ಯ ಸಭೆಯಲ್ಲಿ, ಗೃಹ ಸೌಕರ್ಯ ಸಮಿತಿ ಕುರಿತು ಮೇಯರ್‌ ಎನ್‌. ಕೇಶವಯ್ಯಂಗಾರ್‌ರವರು ಸಭೆ ಮುಂದಿಟ್ಟ ಸಲಹೆ ಅಂಗೀಕಾರವಾಯ್ತು.

ಉಪಾಹಾರ ಏರ್ಪಾಡಿನ ವಿಚಾರದಲ್ಲಿ ಹಿಂದಿನ ಪದ್ಧತಿಯನ್ನೇ ಅನುಸರಿಸುವುದೆಂದು ಅಭಿಪ್ರಾಯ ಪಡಲಾಯ್ತು.

ಅತಿಥಿಗಳು ಬಂದಾಗ ಅವರುಗಳಿಗೆ ಅರ್ಪಿಸುವ ಪುಷ್ಪಹಾರದ ವಿಚಾರ ಚರ್ಚೆಗೆ ಬಂದು, ಪರಿಶೀಲನೆಯಾದ ಬಳಿಕ ಅತಿಥಿಗಳಾಗಿ ಬರುವವರಿಗೆ 15 ರೂಪಾಯಿಗಳ ವೆಚ್ಚದಲ್ಲಿ ಮಾತ್ರ ಪುಷ್ಪಹಾರ ಅರ್ಪಿಸಬೇಕೆಂದು ತೀರ್ಮಾನಿಸಲಾಯಿತು.

ADVERTISEMENT

ಫಲಾಹಾರ ಮತ್ತು ಭೋಜನ ಗೃಹಗಳ ಮುಂದೆ ಗುರ್ತಿಗಾಗಿ ಹಾಗೂ ಪ್ರದರ್ಶನಕ್ಕಾಗಿ ತಗಲು ಹಾಕುವ ಬೋರ್ಡ್‌ಗಳಲ್ಲಿ ಬ್ರಾಹ್ಮಣ, ವೀರಶೈವ, ಮುಸ್ಲಿಂ, ಇತ್ಯಾದಿ ಜಾತಿಸೂಚಕ ಶಬ್ದಗಳನ್ನು ರದ್ದು ಮಾಡಬೇಕೆಂದು ಕಾರ್ಪೊರೇಷನ್‌ ಅಡ್ವೋಕೇಟರು ಮಾಡಿದ್ದ ಸಲಹೆಯು ಸಭೆಯಲ್ಲಿ ಅಂಗೀಕಾರವಾಯ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.