ADVERTISEMENT

25 ವರ್ಷಗಳ ಹಿಂದೆ: ಮಮತಾ ರಾಜೀನಾಮೆ ಒಪ್ಪಲು ಪ್ರಧಾನಿ ನಕಾರ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 23:30 IST
Last Updated 4 ಡಿಸೆಂಬರ್ 2025, 23:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಮಮತಾ ರಾಜೀನಾಮೆ ಒಪ್ಪಲು ಪ್ರಧಾನಿ ನಕಾರ

ನವದೆಹಲಿ, ಡಿ. 4 – ಪಂಜಾಬ್‌ ರೈಲು ದುರಂತದ ನೈತಿಕ ಹೊಣೆ ಹೊತ್ತು ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರು, ಇಂದು ಬೆಳಿಗ್ಗೆ ಕೇಂದ್ರ ಸಚಿವ ಸಂಪುಟಕ್ಕೆ ತಮ್ಮ ರಾಜೀನಾಮೆ ಸಲ್ಲಿಸಿದರು. ಆದರೆ, ರಾಜೀನಾಮೆ ಸ್ವೀಕರಿಸಲು ಪ್ರಧಾನಿ ನಿರಾಕರಿಸಿದ್ದು, ಹುದ್ದೆಯಲ್ಲಿ ಮುಂದುವರಿಯಲು ಮಮತಾಗೆ ಸೂಚಿಸಿದ್ದಾರೆ.

ಮಮತಾ ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಇಂದು ಬೆಳಿಗ್ಗೆ 7.30ಕ್ಕೆ ರವಾನಿಸಿದರು. ಅದನ್ನು ಅಂಗೀಕರಿಸಲು ನಿರಾಕರಿಸಿದ್ದಾರೆ.

‘ಆಡಳಿತದಲ್ಲಿ ಪಕ್ಷದ ವರಿಷ್ಠರ ಹಸ್ತಕ್ಷೇಪ ಇಲ್ಲ’

ಬೆಂಗಳೂರು, ಡಿ. 4– ‘ಗುಲಾಂ ನಬಿ ಅಜಾದ್‌ ಸೇರಿದಂತೆ ಕಾಂಗ್ರೆಸ್‌ನ ರಾಷ್ಟ್ರೀಯ ಘಟಕದ ಪದಾಧಿಕಾರಿಗಳು ಚುನಾವಣಾ ಪ್ರಣಾಳಿಕೆ ಪರಿಶೀಲನೆ ನೆಪದಲ್ಲಿ ರಾಜ್ಯ ಸರ್ಕಾರದ ಆಡಳಿತದಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ’ ಎಂದು ಮುಖ್ಯಮಂತ್ರಿ
ಎಸ್‌.ಎಂ. ಕೃಷ್ಣ ಇಂದು ಹೇಳಿದರು.

ADVERTISEMENT

ವಿದ್ಯಾರ್ಥಿ ಕಾಂಗ್ರೆಸ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆಗೆ ಮುನ್ನ ಪ್ರಕಟಿಸಿದ್ದ ಪ್ರಣಾಳಿಕೆಯ ಎಷ್ಟು ಭಾಗವನ್ನು ಅನುಷ್ಠಾನಕ್ಕೆ ತಂದಿದ್ದೇವೆ ಎಂಬುದನ್ನು ಕಂಡುಕೊಳ್ಳಲು ಪರಿಶೀಲನಾ ಕಾರ್ಯ ನಡೆಸಲಾಗಿದೆ. ಇದೊಂದು ಅತ್ಯಂತ ಆರೋಗ್ಯಕರ ಬೆಳವಣಿಗೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.