ADVERTISEMENT

75 ವರ್ಷಗಳ ಹಿಂದೆ: ‘ಸ್ವತಂತ್ರ ಭಾರತದ ಪ್ರಪ್ರಥಮ ಜನಗಣನೆಯ ಕೀರ್ತಿ ನಿಮ್ಮದು’

1951ರ ಫೆಬ್ರುವರಿ 3, ಶನಿವಾರ

ಪ್ರಜಾವಾಣಿ ವಿಶೇಷ
Published 2 ಫೆಬ್ರುವರಿ 2026, 19:22 IST
Last Updated 2 ಫೆಬ್ರುವರಿ 2026, 19:22 IST
   

ನವದೆಹಲಿ, ಫೆ, 2– ಭಾರತದಲ್ಲಿ ಫೆಬ್ರವರಿ 9ರಿಂದ ಪ್ರಾರಂಭವಾಗುವ ಜನಗಣತಿ ಲೆಕ್ಕದ ಗಣತಿ ತೆಗೆದುಕೊಳ್ಳುವ 6 ಲಕ್ಷ ಮಂದಿಯನ್ನು ಕುರಿತು ಭಾರತದ ಗೃಹ ಸಚಿವ ರಾಜಾಜಿ ಸಂದೇಶ ಕೊಡುತ್ತಾ, ಈ ರಾಷ್ಟ್ರಾದ್ಯಂತ ಕಾರ್ಯಕ್ರಮದಲ್ಲಿ ತಮ್ಮ ಕಾಣಿಕೆಯ ಉತ್ತಮ ಸಾಧನೆ ಬಗ್ಗೆ ಹೆಮ್ಮೆಪಡಬೇಕಾದ ವಿಷಯವೆಂದು ತಿಳಿಸಿದರು.

ನವದೆಹಲಿ ಕೇಂದ್ರದಿಂದ ಮಾಡಿದ ರೇಡಿಯೋ ಪ್ರಸಾರ ಭಾಷಣದಲ್ಲಿ ಗೃಹಮಂತ್ರಿಗಳು, ‘ಪ್ರಿಯ ಸಹ ಕಾರ್ಯಕರ್ತರೇ, ಇದು ಸ್ವತಂತ್ರ ಭಾರತದ ಪ್ರಥಮ ಸೆನ್ಸಸ್ ಕಾರ್ಯಕ್ರಮ’ ಎಂದು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT