
ಪ್ರಜಾವಾಣಿ ವಾರ್ತೆ
ಭಾವನಗರ, ಜ. 19– ಪ್ರಖ್ಯಾತ ಸಮಾಜ ಸೇವಕ ಎ.ವಿ. ಥಕ್ಕರರು (ಥಕ್ಕರ್ ಬಾಪಾ) ಈ ದಿನ ರಾತ್ರಿ 8.20 ಗಂಟೆಗೆ ಇಲ್ಲಿ ನಿಧನರಾದರು. ಅವರ ಕೊನೆಯ ಗಳಿಗೆ ಶಾಂತಿಯುತವಾಗಿತ್ತು.
ಅಮೃತ್ ಲಾಲ್ ವಿ. ಥಕ್ಕರ್ ರವರು ಭಾವನಗರದಲ್ಲಿ 1869ರಲ್ಲಿ ಜನಿಸಿದರು. ಮೊದಲು ಇಂಜಿನಿಯರ್ ಆಗಿ ಅನೇಕ ಕಡೆ ಕೆಲಸ ಮಾಡಿದರು. ಬೊಂಬಾಯಿಯಲ್ಲಿ ಇಂಜಿನಿಯರಾಗಿದ್ದು, 1948ರಲ್ಲಿ ಆ ಹುದ್ದೆಗೆ ರಾಜೀನಾಮೆ ಇತ್ತರು. ಪೂನಾದ ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಗೆ ಆಜೀವ ಸದಸ್ಯರಾಗಿ ಸೇರಿದರು.
ಆನಂತರ ಸಾಮಾಜಿಕ ಸೇವೆಯೇ ಅವರ ಜೀವನದ ಗುರಿಯಾಯಿತು. ಅಂದಿನಿಂದ ಹರಿಜನರು ಮತ್ತು ಹಿಂದುಳಿದವರ ಉದ್ಧಾರ ಕಾರ್ಯ ಆರಂಭಿಸಿ, ಭಿಲ್ಲರ ಸೇವಾಮಂಡಳವನ್ನು ಆರಂಭಿಸಿ ಭಾರತದಾದ್ಯಂತ ತಮ್ಮ ಕಾರ್ಯವನ್ನು ವಿಸ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.