
75 ವರ್ಷಗಳ ಹಿಂದೆ ಈ ದಿನ
ಮದರಾಸ್, ಜ. 29– ಆರೋಗ್ಯ ಕಾರಣಗಳಿಗಾಗಿ ಎರಡು ತಿಂಗಳು ರಜಾದ ಮೇಲಿರುವ ಮದರಾಸಿನ ಆರೋಗ್ಯ ಸಚಿವ ಡಾ. ಟಿ.ಎಸ್.ಎಸ್. ರಾಜನ್‌ರವರು ಒಂದು ರೂಪಾಯಿಯಂತೆ ಸಾಂಕೇತಿಕ ಸಂಬಳವನ್ನು ತೆಗೆದುಕೊಳ್ಳಲು ಸ್ವಯಂಪ್ರೇರಿತರಾಗಿ ಒಪ್ಪಿದ್ದಾರೆ.
ರಜಾ ಕಾಲದಲ್ಲಿ ಮಂತ್ರಿಗಳು ತಮ್ಮ ಪೂರ್ಣ ಸಂಬಳವನ್ನು ತೆಗೆದುಕೊಳ್ಳಲು ಅಡ್ಡಿಪಡಿಸುವಂತಹ ಸರ್ಕಾರಿ ಕಾನೂನೇನೂ ಇರುವುದಿಲ್ಲ.
ಮದರಾಸ್, ಜ. 29– ಕೆನಡಾದಿಂದ 9,780 ಟನ್ ಗೋಧಿ ತೆಗೆದುಕೊಂಡು ಷೆಗ್ರೊಕ್ ಹಡಗು ಇಂದು ಮದರಾಸ್ ರೇವಿಗೆ ಆಗಮಿಸಿತು. ಇಲ್ಲಿ 3,000 ಟನ್ ಧಾನ್ಯವನ್ನು ಇಳಿಸಿ ಉಳಿದುದ್ದನ್ನು ಕಲ್ಕತ್ತೆಗೆ ಕೊಂಡೊಯ್ಯುವುದು.
ಈ ಧಾನ್ಯದಲ್ಲಿ ಮೈಸೂರಿಗೆ 1,500 ಟನ್, ಮದರಾಸಿಗೆ 500 ಟನ್ ಮತ್ತು ಹೈದರಾಬಾದ್‌ಗೆ 1,000 ಟನ್ ಹಂಚಲಾಗುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.