ADVERTISEMENT

75 ವರ್ಷಗಳ ಹಿಂದೆ | ಅಗ್ನಿ ಪರ್ವತ ಸ್ಫೋಟ: ನಾಲ್ಕು ಸಾವಿರ ಮಂದಿ ಮರಣ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 23:30 IST
Last Updated 23 ಜನವರಿ 2026, 23:30 IST
   

ಕ್ಯಾನ್‌ಬೆರಾ, ಜ.23– ನ್ಯೂಗಿನಿಯಾದ ಲ್ಯಾಮಿಂಗ್‌ಟನ್ ಅಗ್ನಿ ಪರ್ವತದಿಂದ ಚಿಮ್ಮಿಬಂದ ಭಯಂಕರ ಮೃತ್ಯುಕಾರಕ ಶಿಲಾ ಪ್ರವಾಹವು ತನಗೆ ತಾನೇ ತಾಂಡವವಾಡುತ್ತಿದೆ. ಈ ಜ್ವಾಲಾಮುಖಿಯ ರೌದ್ರಾವತಾರಕ್ಕೆ ನಾಲ್ಕು ಸಾವಿರ ಮಂದಿ ಬಲಿಯಾಗಿರುವುದು ದೃಢಪಟ್ಟಿದೆ ಎಂದು ನ್ಯೂಗಿನಿಯಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಗ್ನಿ ಪರ್ವತದ ಅಕ್ಕಪಕ್ಕದ 20 ಹಳ್ಳಿಗಳಲ್ಲಿ ಜನರ ಸುಳಿವೇ ಇಲ್ಲವೆಂದೂ, ಮನೆ–ಮಠಗಳೆಲ್ಲ ಉರುಳಿ, ಗಿಡ ಮರಗಳೆಲ್ಲ ಸುಟ್ಟುಹೋಗಿವೆ ಎಂದು ವಿಮಾನ ವೀಕ್ಷಕರೊಬ್ಬರು ವರದಿ ಮಾಡಿದ್ದಾರೆ.

ಈ ಸ್ಥಳಕ್ಕೆ ಮೋರ್ಸ್‌ ಬಿಯಿ ಪರಿಹಾರ ಸಾಮಗ್ರಿಗಳನ್ನೊತ್ತು ಹಡಗೊಂದು ತೆರಳಿದೆ. ಸತ್ತವರ ಅಂತ್ಯಕ್ರಿಯೆ ನಡೆಸಿ, ಗಾಯಗೊಂಡವರನ್ನು ಹೊರತರಲು ಆಳುಗಳ ತಂಡವನ್ನು ಕಳುಹಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.