ADVERTISEMENT

ಆಶಾದಾಯಕ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 20:00 IST
Last Updated 21 ಜನವರಿ 2020, 20:00 IST

ಅಳಿವಿನಂಚಿನಲ್ಲಿರುವ ಹೆಬ್ಬಕಗಳು ಮತ್ತು 21 ಪ್ರಭೇದಗಳ ಪಕ್ಷಿಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಿರುವ ವರದಿ (ಪ್ರ.ವಾ., ಜ. 20) ಓದಿ ಖುಷಿಯಾಯಿತು.‌‌‌ ಅಳಿವಿನಂಚಿನಲ್ಲಿರುವ ಜೀವಿಗಳ ಮೇಲೆ ಇಲಾಖೆ ತೋರುತ್ತಿರುವ ಕಾಳಜಿ ಆಶಾದಾಯಕ.

ಹೆಬ್ಬಕಗಳು‌ ಅತ್ಯಂತ ನಾಚಿಕೆ ಸ್ವಭಾವದ ಪಕ್ಷಿಗಳು. ಮನುಷ್ಯನ ಉಪಸ್ಥಿತಿ ಅವುಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅದರಲ್ಲೂ ಸಂತಾನೋತ್ಪತ್ತಿ ಸಮಯದಲ್ಲಿ, ಅವುಗಳ ಗೂಡುಗಳ ಬಳಿ ಮನುಷ್ಯ ಸುಳಿದಾಡಿದರೂ ಸಾಕು ಹೆಬ್ಬಕಗಳು ಬೆದರುತ್ತವೆ ಮತ್ತು ಮತ್ತೆಂದೂ ಗೂಡಿಗೆ ಮರಳುವುದಿಲ್ಲ. ಆದ್ದರಿಂದ ಅವುಗಳಿಗೆ ಮೀಸಲಿಡುವ ಪ್ರದೇಶದಲ್ಲಿ ಮೊದಲು ಮಾನವನ ಪ್ರವೇಶವನ್ನು ನಿರ್ಬಂಧಿಸಬೇಕು.

ಇನ್ನು ಅವುಗಳ ಚಲನವಲನವನ್ನು ಗಮನಿಸಲು ಮತ್ತು ಅಧ್ಯಯನ ಮಾಡಲು ಡ್ರೋನ್‌ ಕ್ಯಾಮೆರಾಗಳಂತಹ ತಂತ್ರಜ್ಞಾನದ ಮೊರೆ ಹೋಗಬೇಕೇ ವಿನಾ ತಪ್ಪಿಯೂ ಮಾನವನ ಪ್ರವೇಶಕ್ಕೆ ಅವಕಾಶ ನೀಡಬಾರದು. ಒಂದು ವೇಳೆ ಪ್ರಸ್ತುತ ಯೋಜನೆಯು ಫಲಿಸಿದರೆ ಭವಿಷ್ಯದಲ್ಲಿ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ನಡೆಸಲು ಅವಕಾಶ ನೀಡದೆ, ಶಾಶ್ವತವಾಗಿ ಮಾನವ ನಿರ್ಬಂಧಿತ ಪ್ರದೇಶವೆಂದು ಘೋಷಿಸಬೇಕು.‌‌

ADVERTISEMENT

ಯಾವುದೇ ಜೀವಿಯನ್ನು ನಾವು ಸಂರಕ್ಷಿಸುವ ಅಗತ್ಯವಿಲ್ಲ. ಅವುಗಳನ್ನು ಅವುಗಳ ಪಾಡಿಗೆ ಬಿಟ್ಟು, ಮಾನವನ ಪ್ರವೇಶ ನಿರ್ಬಂಧಿಸಿದರೆ ಸಾಕು. ಸಂರಕ್ಷಣೆ ತಾನಾಗಿಯೇ ಆಗುತ್ತದೆ.

–ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.