ADVERTISEMENT

ವಾಚಕರ ವಾಣಿ| ಹಕ್ಕೇ ಮೊದಲಿರಲಿ, ಬಳಿಕ ಕರ್ತವ್ಯ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 19:30 IST
Last Updated 27 ಜನವರಿ 2023, 19:30 IST

ಭಾರತ ಸಂವಿಧಾನದ ಬಗ್ಗೆ ವಿವರಿಸಿರುವ ಅಬ್ದುಲ್ ರೆಹಮಾನ್ ಪಾಷ ಅವರು (ಸಂಗತ, ಜ. 26) ನಾಗರಿಕರಿಗೆ ಕರ್ತವ್ಯಗಳೇ ಹಕ್ಕುಗಳ ನಿಜವಾದ ಮೂಲವಾಗಿವೆ ಎಂದು ಹೇಳಿದ್ದಾರೆ. ವಾಸ್ತವದಲ್ಲಿ ಮನುಷ್ಯನಿಗೆ ಮೊದಲು ಬೇಕಾಗಿರುವುದು ಹಕ್ಕುಗಳು. ಸಂವಿಧಾನ ಪ್ರತಿಪಾದಿಸಿರುವ ಜೀವಿಸುವ ಹಕ್ಕು ಇಲ್ಲದೆ ಮನುಷ್ಯ ಬದುಕುವುದಕ್ಕೇ ಆಗುವುದಿಲ್ಲ, ಇನ್ನು ಅವರು ಕರ್ತವ್ಯಪಾಲನೆ ಮಾಡುವುದು ಯಾವಾಗ?

ಅಷ್ಟಕ್ಕೂ ಹಕ್ಕಿಗೂ ಕರ್ತವ್ಯಕ್ಕೂ ಪೈಪೋಟಿಯೇ ಇಲ್ಲ. ಎರಡೂ ತಮ್ಮದೇ ಆದ ಮಹತ್ವ ಹೊಂದಿವೆ. ಹಾಗೆಂದು ಅವುಗಳ ಮಧ್ಯೆ ಪೈಪೋಟಿ ಆಗಿ ಯಾವುದು ಮೇಲುಗೈ ಅಂದರೆ ಆಗ ಅವಶ್ಯವಾಗಿ ಹಕ್ಕುಗಳದೇ ಮೇಲುಗೈ ಎಂಬುದರಲ್ಲಿ ಎರಡು ಮಾತಿಲ್ಲ.

- ರಂಗಸ್ವಾಮಿ ಮಾರ್ಲಬಂಡಿ, ಪೆದ್ದ ಹರಿವಾನಂ, ಆದೋನಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.