ADVERTISEMENT

ವಾಚಕರ ವಾಣಿ: ಆದರ್ಶ ಗುಣ ಅರಿಯಬೇಕಿದೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2022, 19:30 IST
Last Updated 11 ನವೆಂಬರ್ 2022, 19:30 IST

ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯು ಇದೀಗ ಲೋಕಾರ್ಪಣೆಗೊಂಡಿದೆ. ಇದು ಬೆಂಗಳೂರಿನ ನಿರ್ಮಾತೃಗೆ ನಾವು ಸಲ್ಲಿಸಿದ ಗೌರವ ಎಂದು ಸ್ಮರಿಸಿಕೊಳ್ಳಬಹುದಷ್ಟೇ. ಆದರೆ, ಅವರ ಆದರ್ಶಗಳನ್ನು ನಾವು ಪಾಲಿಸುತ್ತಿದ್ದೇವೆಯೇ ಎಂದು ಪ್ರಶ್ನಿಸಿಕೊಂಡಾಗ, ಉತ್ತರ ಮಾತ್ರ ನಿರಾಶಾದಾಯಕ.

ಕೆಂಪೇಗೌಡ ಅವರಲ್ಲಿದ್ದ ಆದರ್ಶ ಗುಣ, ದೂರದರ್ಶಿತ್ವ, ಜನಪರ ಕಾಳಜಿ, ಉದಾತ್ತ ಧ್ಯೇಯ ಯಾವುವೂ ನಮ್ಮ ಜನಪ್ರತಿನಿಧಿಗಳಲ್ಲಿ ಇಲ್ಲದಿರುವುದು ಎದ್ದು ಕಾಣುತ್ತದೆ. ಉದಾಹರಣೆಗೆ, ಕೆಂಪೇಗೌಡರು ಅಂದು ಕಟ್ಟಿಸಿದ್ದ ಹಲವಾರು ಕೆರೆಗಳನ್ನು ಮುಚ್ಚಿ ರಿಯಲ್ ಎಸ್ಟೇಟ್ ದಂಧೆಯನ್ನಾಗಿ ಮಾಡಿರುವುದನ್ನು, ಆಗಾಗ್ಗೆ ಸುರಿಯುವ ಭಾರಿ ಮಳೆಯು ಜಗಜ್ಜಾಹೀರು ಮಾಡುತ್ತಲೇ ಇರುತ್ತದೆ. ನಗರದ ಆಡಳಿತ ಕೇಂದ್ರವಾಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ರಸ್ತೆಗಳಲ್ಲಿನ ಗುಂಡಿಗಳನ್ನು ಸರಿಪಡಿಸದೇ ಇರುವುದರಿಂದ ಅಪಘಾತಕ್ಕೀಡಾಗಿ ಹಲವು ಮಂದಿ ಸಾವಿಗೀಡಾಗಿ ರುವುದು ಕಣ್ಮುಂದೆಯೇ ಇದೆ. ಇವು ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತಿವೆ. ಕೆಂಪೇಗೌಡರ ಹಿರಿಮೆಯನ್ನು ಸಾರುವ ಕೆಲಸಗಳು ಆಗುತ್ತಿಲ್ಲ. ಸರ್ಕಾರಗಳು ಗಣ್ಯರ ಪ್ರತಿಮೆಗಳನ್ನು ನಿರ್ಮಿಸುವುದಕ್ಕಿಂತ ಹೆಚ್ಚಾಗಿ ಅಂತಹವರ ವ್ಯಕ್ತಿತ್ವ ಹಾಗೂ ಆದರ್ಶ ಗುಣಗಳನ್ನು ಅರಿತು ಅದರಂತೆ ನಡೆಯುವುದನ್ನು ಕಲಿಯಬೇಕಿದೆ.

–ನಾಗರಾಜ್ ಮಾದೇಗೌಡ, ಕನಕಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.