ADVERTISEMENT

ಅವಿವೇಕದ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 6 ಮೇ 2020, 19:30 IST
Last Updated 6 ಮೇ 2020, 19:30 IST

ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ, ಸರ್ಕಾರ ಎಂಥಾ ಅವಿವೇಕತನದಿಂದ ಈ ಸ್ಥಿತಿಯನ್ನು ನಿಭಾಯಿಸುತ್ತಿದೆ ಎಂಬುದು ತಿಳಿಯುತ್ತದೆ. ಒಂದೂವರೆ ತಿಂಗಳಿಂದಲೂ ಸರಿಯಾಗಿ ಊಟ ಸಿಕ್ಕರೆ ಅದೇ ಮಹಾಭಾಗ್ಯ ಎಂದುಪರಿತಪಿಸಿದ್ದ ಕಾರ್ಮಿಕರನ್ನು ಊರಿಗೆ ಕಳುಹಿಸುವುದಕ್ಕೆ ಆರಂಭದಲ್ಲಿ ದುಪ್ಪಟ್ಟು ಪ್ರಯಾಣ ದರ ವಿಧಿಸಿದ್ದು ಹೇಗೆ ಸಮರ್ಥನೀಯ? ಕಾರ್ಮಿಕರು ಅಷ್ಟೊಂದು ಹಣವನ್ನು ಎಲ್ಲಿಂದ ತರುತ್ತಾರೆ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲವಾಯಿತೇ?

ಸರ್ಕಾರದ ಪ್ರತೀ ನಡೆಯನ್ನೂ ಜನ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಜನಪ್ರತಿನಿಧಿಗಳ ಇಂತಹ ಅಸಮರ್ಥತೆಗೆ ಪಕ್ಷದ ನಮ್ಮಂತಹ ಕಾರ್ಯಕರ್ತರು ಜನರಿಗೆ ಉತ್ತರಿಸಲು ಕಷ್ಟವಾಗುತ್ತದೆ. ಇಂತಹ ಕ್ಷಿಷ್ಟ ಸಂದರ್ಭಗಳನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದಾದರೆ, ಅಂತಹವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಲಿ.

-ನರಸಿಂಹಮೂರ್ತಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.