
2026 ನ್ನು ಬರಮಾಡಿಕೊಳ್ಳಲು ಜನರು ಕಾದು ಕುಳಿತಿದ್ದಾರೆ. ಈ ನಡುವೆ ಮುಂದಿನ ವರ್ಷಕ್ಕೆ ಕಾಲಿಡುವ ಮೊದಲು ಕೆಲವು ನಿರ್ಣಯಗಳನ್ನು (Resolution) ಹಾಕಿಕೊಳ್ಳುವುದು ಉತ್ತಮ. ಅವುಗಳು ನಿಮ್ಮ ಜೀವನವನ್ನು ಬದಲಿಸಬಹುದು.
2026 ಕ್ಕೆ ನೀವು ತೆಗೆದುಕೊಳ್ಳಬಹುದಾದ ಪ್ರಮುಖ ನಿರ್ಣಯಗಳು ಏನೇನು ಎಂಬುದನ್ನು ನೋಡೋಣ.
2025ರ ನಿರ್ಣಯ ನೆನಪಿಸಿಕೊಳ್ಳಿ: ಮೊದಲನೇಯದಾಗಿ 2025ರಲ್ಲಿ ನೀವು ಅಂದುಕೊಂಡ ಕೆಲಸ ಮಾಡಿ ಮುಗಿಸಿದ್ದೀರಾ ಎಂಬುದನ್ನು ನೆನಪಿಸಿಕೊಳ್ಳಿ. ಮಾಡಿ ಮುಗಿಸಿದ ಕೆಲಸ ಯಾವುವು? ಬಾಕಿ ಇರುವುದು ಎಷ್ಟು? ಎಂಬುದನ್ನು ಪಟ್ಟಿ ಮಾಡಿ. ಕೆಲವನ್ನು ಈ ವರ್ಷ ಪೂರ್ಣಗೊಳಿಸಲು ಯೋಜನೆ ಮಾಡಿ.
ಉತ್ತಮ ಆರೋಗ್ಯದ ಅಭ್ಯಾಸ: ಆರೋಗ್ಯ ಎಲ್ಲದಕ್ಕಿಂತ ಮುಖ್ಯ. ಹಾಗಾಗಿ ಈ ವರ್ಷದಲ್ಲಿ ಆರೋಗ್ಯದ ಕಡೆ ಗಮನವಿರಲಿ. ವಾಕಿಂಗ್‌ನಿಂದ ಹಿಡಿದು ಒಳ್ಳೆಯ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಸಿಗರೇಟ್, ಹಾಲ್ಕೋಹಾಲ್ ಸೇವನೆಯಿಂದ ದೂರ ಉಳಿಯುವುದು ಉತ್ತಮ ಆಯ್ಕೆಯಾಗಿದೆ.
ಸಮತೋಲಿತ ಮತ್ತು ಆರೋಗ್ಯಕರ ಆಹಾರ ಸೇವನೆ: ಈ ವರ್ಷ ಹೊರಗಿನ ಆಹಾರ ಅಥವಾ ಪಾಸ್ಟ್‌ಪುಡ್ ಸೇವಿಸುವುದಿಲ್ಲವೆಂಬ ಸಂಕಲ್ಪ ಮಾಡಿ. ಇದು ನಿಮ್ಮ ಪೌಷ್ಟಿಕಾಂಶ ಆಹಾರ ಸೇವನೆಯನ್ನು ಉತ್ತೇಜಿಸುತ್ತದೆ. ಕೆಲವು ಪೋಷಕಾಂಶ ಭರಿತ ತರಕಾರಿ, ಹಣ್ಣುಗಳ ಸೇವನೆ ಉತ್ತಮ. ದೇಹಕ್ಕೆ ಸಾಕಾಗುವಷ್ಟು ನೀರಿನ ಸೇವೆನೆಯ ಅಭ್ಯಾಸ ಉತ್ತಮ.
ಸಮಾಜ ಸೇವೆ: ನಿಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜ ಸೇವೆಗೆ ಮೀಸಲಿಡಿ. ವಿಶೇಷವಾಗಿ ಬಡವರಿಗೆ, ಅನಾಥಾಶ್ರಮಗಳಿಗೆ ಸಹಾಯ ಮಾಡಿ. ಬೀದಿ ಬದಿ ವಾಸಿಸುವವರಿಗೆ ಕೈಲಾದಷ್ಟು ಸಹಾಯ ಮಾಡುವುದು ಮನಸ್ಸಿಗೆ ಖುಷಿ ನೀಡುತ್ತದೆ. ಇದು ಇತರರಿಗೂ ಮಾದರಿಯಾಗಬಹುದು.
ನಿದ್ದೆಗೆ ಆದ್ಯತೆ ಕೊಡಿ: ಉತ್ತಮ ನಿದ್ದೆ ಉತ್ತಮ ಆರೋಗ್ಯಕ್ಕೆ ಸಹಕಾರಿ ಎಂಬ ಮಾತಿದೆ. ಈ ವರ್ಷ ನಿದ್ದೆಗೆ ಹೆಚ್ಚು ಸಮಯವನ್ನು ಮೀಸಲಿಡಲು ಯೋಜನೆ ಮಾಡಿ. ಆರೋಗ್ಯಕರ ನಿದ್ದೆ ನಿಮ್ಮ ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ. ಪ್ರತಿ ದಿನ 7 ರಿಂದ 8 ಗಂಟೆ ನಿದ್ದೆ ಮಾಡುವ ಸಂಕಲ್ಪ ಮಾಡಿರಿ.
ಪರಿಸರ ಕಾಳಜಿ: ಸಾಧ್ಯವಾದರೆ ಕನಿಷ್ಠ ಒಂದು ಗಿಡವನ್ನು ನೆಡಿ. ಪ್ಲಾಸ್ಟಿಕ್ ಎಲ್ಲಂದರಲ್ಲಿ ಎಸೆಯುವುದಿಲ್ಲ ಎಂಬ ಸಂಕಲ್ಪ ಮಾಡಿ. ಸಾಧ್ಯವಾದಷ್ಟು ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವುದಾಗಿ ನಿರ್ಣಯ ಕೈಗೊಳ್ಳಿ.
ಹೊಸ ಹವ್ಯಾಸಗಳು: ನಿಮಗಿಷ್ಟದ ಪ್ರವೃತ್ತಿಯನ್ನು ನಿಮ್ಮ ಕೆಲಸದ ಜೊತೆ ಮಾಡಿ. ಪುಸ್ತಕ ಓದುವುದು, ಹೊಲಿಗೆ ಮಾಡುವುದು, ಹೊಸ ಭಾಷೆ ಕಲಿಯುವುದು ಅಥವಾ ಕೃಷಿ ಮಾಡುವುದು. ಇತರೆ ನಿಮ್ಮ ಆಸಕ್ತಿ ಕ್ಷೇತ್ರದಲ್ಲಿ ಸಮಯ ಕಳೆಯಿರಿ. ಸಾಧ್ಯವಾದಷ್ಟು ಮೊಬೈಲ್‌ನಿಂದ ದೂರವಿರಿ. ಪರದೆ ಸಮಯವನ್ನು ಸಿಮೀತಗೊಳಿಸಿ.
ಪೋಷಕರೊಂದಿಗೆ ಹೆಚ್ಚಿನ ಸಮಯ ಕಳೆಯಿರಿ: ನಿಮ್ಮ ಪೋಷಕರೊಂದಿಗೆ ಸಂತೋಷದ ಕ್ಷಣಗಳನ್ನು ಅನುಭವಿಸಿ. ಸಾಧ್ಯವಾದರೆ ಕುಟುಂಬದೊಂದಿಗೆ ಪ್ರವಾಸ ಹೋಗಿ. ನಿಮ್ಮ ಹುಟ್ಟೂರಿಗೂ ಹೋಗಬಹುದು.
ಆತ್ಮೀಯ ಸ್ನೇಹಿತನ ಭೇಟಿ: ನಿಮ್ಮ ಆತ್ಮೀಯ ಸ್ನೇಹಿತೆ ಅಥವಾ ಸ್ನೇಹಿತನನ್ನು ಭೇಟಿ ಮಾಡಿ. ಸಾಧ್ಯವಾದರೆ ಒಂದೆರೆಡು ದಿನ ಅವರೊಂದಿಗೆ ಕಾಲ ಕಳೆಯಿರಿ. ವರ್ಷದಲ್ಲಿ ನಡೆದ ಘಟನೆಗಳ ಕುರಿತು ಪರಸ್ಪರ ಹಂಚಿಕೊಂಡು ಮೇಲುಕು ಹಾಕಿ.
ಈ ವರ್ಷ ಸಾಧಿಸಬೇಕಾದ್ದು ಏನು?: ಚಿಕ್ಕದಾದರೂ ಸರಿಯೇ ಈ ವರ್ಷದ ಗುರಿಯನ್ನು ಸೆಟ್ ಮಾಡಿ. ಅದಕ್ಕೆ ಬೇಕಾದ ಯೋಜನೆ ರೂಪಿಸಿ. ಇದರಿಂದ ನಿಮ್ಮ ಜೀವನದಲ್ಲಿ ಹೊಸ ಮೈಲುಗಲ್ಲಿ ಸಾಧಿಸಲು ಸಹಕಾರಿಯಾಗಲಿದೆ. ನಿಮ್ಮ ಕೌಶಲ್ಯ ವೃದ್ಧಿಗೆ ಸಮಯ ಕೊಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.