
‘ಆಧಾರ್’ ಅಪ್ಲಿಕೇಶನ್
ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ಜೋಡಿಸಬೇಕೆ ಅಥವಾ ಈಗಾಗಲೇ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯನ್ನು ನವೀಕರಿಸಬೇಕೆ? ಅದಕ್ಕಾಗಿ ಆಧಾರ್ ಸೇವಾ ಕೇಂದ್ರಗಳಿಗೆ ಹೋಗಿ ಸರದಿ ಸಾಲಿನಲ್ಲಿ ನಿಲ್ಲುವ ಕಾಲ ಹೋಯ್ತು. ಈಗ ಬೆರಳ ತುದಿಯಲ್ಲಿಯೇ ‘ಆಧಾರ್ ಅಪ್ಲಿಕೇಶನ್’ ಮೂಲಕ ಕುಳಿತಲ್ಲಿಯೇ ಎಲ್ಲವನ್ನೂ ಮಾಡಬಹುದು.
‘ಆಧಾರ್’ ಇಂದು ಕೇವಲ ಭಾರತೀಯರ ಗುರುತಿನ ಚೀಟಿಯಾಗಿ ಉಳಿದಿಲ್ಲ. ಎಲ್ಲ ವ್ಯವಹಾರಗಳ ಕೀಲಿ ಕೈಯಾಗಿ ಬದಲಾಗಿದೆ. ಸರ್ಕಾರಿ ಸೇವೆಗಳಿಂದ ಹಿಡಿದು ಪಿಂಚಣಿವರೆಗೆ ಎಲ್ಲ ದಾಖಲೆಗಳಿಗೂ ಆಧಾರ್ ಜೋಡಣೆಯಾಗಿದೆ. ‘ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ’ ಈವರೆಗೆ ಆಧಾರ್‌ನಲ್ಲಿ ಸಾಕಷ್ಟು ಪರಿಷ್ಕರಣೆ ಮಾಡುತ್ತಾ ಬಂದಿದೆ. ಇದೀಗ ಆಧಾರ್ ಬಳಕೆಯನ್ನು ಮತ್ತಷ್ಟು ಸುಲಭಗೊಳಿಸಲು ‘ಒಂದು ಕುಟುಂಬ ಒಂದು ಆ್ಯಪ್’ ಉಪಕ್ರಮದಡಿ ‘ಆಧಾರ್’ ಎಂಬ ಅಪ್ಲಿಕೇಶನ್ ಒಂದನ್ನು ಸಿದ್ಧಪಡಿಸಿದೆ. ನೂತನ ಅಪ್ಲಿಕೇಶನ್‌ನಿಂದಾಗುವ ಉಪಯೋಗಗಳೇನು, ಏನೆಲ್ಲ ಫೀಚರ್ಸ್ ಲಭ್ಯ, ಬಳಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.
ಏನಿದು ‘ಆಧಾರ್’ ಅಪ್ಲಿಕೇಶನ್?
ಆಧಾರ್ ನವೀಕರಣ ಮತ್ತು ನಿರ್ವಹಣೆಯನ್ನು ಸರಳ, ಸುರಕ್ಷಿತ ಹಾಗೂ ದೈನಂದಿನ ಬಳಕೆಗೆ ಹೆಚ್ಚು ಪ್ರಾಯೋಗಿಕವಾಗಿಸುವ ಉದ್ದೇಶವನ್ನು ಆಧಾರ್ ಅಪ್ಲಿಕೇಶನ್ ಹೊಂದಿದೆ. ಸಾಮಾನ್ಯವಾಗಿ ಹೋಟೆಲ್, ಆಸ್ಪತ್ರೆ, ಮೊಬೈಲ್ ಅಂಗಡಿ, ಸರ್ಕಾರಿ ಕಚೇರಿ ಸೇರಿದಂತೆ ಇತರೆ ಎಲ್ಲ ಸೇವಾ ವಲಯಗಳಲ್ಲಿ ಗುರುತಿನ ದಾಖಲೆಯಾಗಿ ಆಧಾರ್ ಕಾರ್ಡ್‌ನ ನಕಲಿ ಪ್ರತಿ ನೀಡುತ್ತೇವೆ. ಇದರಿಂದ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಸೇರಿದಂತೆ ಇತರೆ ವೈಯಕ್ತಿಕ ಮಾಹಿತಿಗಳು ಬಹಿರಂಗವಾಗುತ್ತಿವೆ. ಇದರಿಂದ ಅನುಕೂಲಗಳಿಗಿಂತ ಹೆಚ್ಚು ತೊಡಕುಗಳು ಉಂಟಾಗಬಹುದು. ಆದ್ದರಿಂದ ‘ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ’ ನೂತನ ಅಪ್ಲಿಕೇಶನ್ ಮೂಲಕ ಆಧಾರ್ ದತ್ತಾಂಶವನ್ನು ರಕ್ಷಿಸಲಿದೆ. ಅಪ್ಲಿಕೇಶನ್ ಮೂಲಕ ಆಧಾರ್‌ನೊಂದಿಗೆ ಜೋಡಿಸಿರುವ ಮೊಬೈಲ್ ನಂಬರ್ ಹಾಗೂ ವಿಳಾಸವನ್ನು ಬದಲಿಸಬಹುದು. ಆಫ್ಲೈನ್ ಬಳಕೆಗೂ ಆ್ಯಪ್ ಲಭ್ಯವಿದೆ.
ಇನ್ನು ಮುಂದೆ ವಿವಿಧ ಕೆಲಸಗಳಿಗಾಗಿ ದಾಖಲೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಆಧಾರ್‌ನ ಭೌತಿಕ ಪ್ರತಿ ನೀಡಬೇಕಾದ ಅಗತ್ಯವಿಲ್ಲ. ಆನ್‌ಲೈನ್‌ನಲ್ಲೇ ಸಲ್ಲಿಸಬಹುದು. 2 ಪ್ರಕಾರದಲ್ಲಿ ಮಾಹಿತಿ ಹಂಚಿಕೊಳ್ಳಬಹುದು. ಅವುಗಳೆಂದರೆ,
ಹಂಚಿಕೆ ಐಡಿ: ಬಳಕೆದಾರರು ‘ಪಾಸ್‌ವರ್ಡ್-ರಕ್ಷಿತ ಆಧಾರ್ ಪಿಡಿಎಫ್’ ರಚಿಸಬಹುದು. ಅವಶ್ಯಕತೆಗೆ ಅನುಗುಣವಾಗಿ ಹೆಸರು ಮತ್ತು ವಯಸ್ಸಿನಂತಹ ಆಯ್ದ ವಿವರಗಳನ್ನು ಮಾತ್ರ ಹಂಚಿಕೊಳ್ಳಬಹುದು.
ಕ್ಯೂ ಆರ್ ಕೋಡ್ ಸ್ಕ್ಯಾನ್: ಅಪ್ಲಿಕೇಶನ್‌ನಲ್ಲಿ ನಿಮ್ಮ ಆಧಾರ್‌ನ ಕ್ಯೂಆರ್ ಕೋಡ್ ಲಭ್ಯವಿರಲಿದೆ. ಅಗತ್ಯವಿದ್ದಾಗ ಆಧಾರ್ ಪರಿಶೀಲನೆಗೆ ಇದನ್ನು ಬಳಕೆ ಮಾಡಬಹುದು. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ನಿಮ್ಮ ಮಾಹಿತಿ ಆನ್ಲೈನ್ ಮೂಲಕ ಹಸ್ತಾಂತರವಾಗುವುದು. ಇದರಿಂದಾಗಿ ಆಧಾರ್ ದೃಢೀಕರಣ ಪ್ರಕ್ರಿಯೆ ಸುಲಭವಾಗಲಿದೆ.
ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಸ್ಟೋರ್‌ನಲ್ಲಿ ಆ್ಯಪ್ ಉಚಿತವಾಗಿ ಲಭ್ಯವಿದೆ. ಡೌನ್ಲೋಡ್ ಮಾಡಿಕೊಂಡು ಆ್ಯಪ್ ತೆರೆಯಬೇಕು. ಅಲ್ಲಿ ಗೋಚರಿಸುವ ನಿಬಂಧನೆಗಳಿಗೆ ಅನುಮತಿ ನೀಡಬೇಕು. ಬಳಿಕ ‘begin journey’ ಆಯ್ಕೆ ಮಾಡಬೇಕು. ನಂತರ ‘continue register’ ಕ್ಲಿಕ್ ಮಾಡಿ.
'register with just 3 steps' ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ‘enter your Aadhaar number’ ಆಯ್ಕೆ ಮಾಡಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ‘confirm Aadhaar number’ ಅನ್ನು ಕ್ಲಿಕ್ಕಿಸಿ.
‘terms and conditions’ ಪುಟ ತೆರೆದುಕೊಳ್ಳುತ್ತದೆ. ‘continue’ ಆಯ್ಕೆ ಮಾಡಿ. ಈಗ ಮೊಬೈಲ್ ಸಂಖ್ಯೆ ಪರೀಕ್ಷೆಯಾಗುತ್ತದೆ. ಬಳಿಕ face authentication ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ‘start face authentication’ ಅನ್ನು ಕ್ಲಿಕ್ ಮಾಡಿ ನಿಮ್ಮ ಮುಖವನ್ನು ಸ್ಕ್ಯಾನ್ ಮಾಡಿ.
ನಿಮ್ಮ ಆಧಾರ್ ಅಪ್ಲಿಕೇಶನ್ ದೃಢೀಕರಣವಾಗುತ್ತದೆ. ಆಧಾರ್ ಅಪ್ಸಿಕೇಷನ್‌ಗೆ ಪಾಸ್‌ವರ್ಡ್ ಹೊಂದಿಸಬಹುದು. ಈಗ ಆಧಾರ್ ಅಪ್ಲಿಕೇಶನ್ ಸಂಪೂರ್ಣವಾಗಿ ಸೇವೆಗೆ ಸಿದ್ಧವಾಗುತ್ತದೆ.
ಅಪ್ಲಿಕೇಷನ್‌ನ ಮುಖ ಪುಟ ತೆರೆಯಿರಿ. ಇದರಲ್ಲಿ ಹಲವು ಆಯ್ಕೆಗಳು ಕಾಣುತ್ತವೆ. ಕೆಳಭಾಗದಲ್ಲಿ ‘selective share , download aadhaar , biometric unlocked , home , security, services’ ಮತ್ತು ‘help’ ಸೇರಿದಂತೆ ನಿಮ್ಮ ಭಾಷೆಯನ್ನು ಆರಿಸಬಹುದು.
select share ಆಯ್ಕೆ ಮಾಡಿದರೆ, ನಿಮ್ಮ ಆಧಾರ್ ಮಾಹಿತಿಯನ್ನು ಬೇರೆಯವರಿಗೆ ಕಳುಹಿಸಿ ಕೊಡಬಹುದು. ಇದರಲ್ಲಿ ನಿಮಗೆ ಅಗತ್ಯವಿರುವ ಮಾಹಿತಿಯನ್ನು ಆರಿಸಿ ಕೊಳ್ಳಬಹುದು. (ಉದಾಹರಣೆಗೆ ಫೋಟೊ ಮತ್ತು ವಿಳಾಸ ಮಾತ್ರ ಅಗತ್ಯವಿದ್ದರೆ ಅದನ್ನು ಆಯ್ಕೆ ಮಾಡಿ ಕಳುಹಿಸಬಹುದು). Share custom id ಆಯ್ಕೆ ಮಾಡಿ ಮಾಹಿತಿ ಹಂಚಿಕೊಳ್ಳಬಹುದು.
download aadhaar , ಆಯ್ಕೆ ಮಾಡಿಕೊಂಡು ಎಲ್ಲೆಡೆ ಯಾವಾಗ ಬೇಕಾದರೂ ಡೌನ್ಲೋಡ್ ಮಾಡಿಕೊಳ್ಳಬಹುದು. ಆಧಾರ್ ಪಿಡಿಎಫ್ ಗೆ ಸುರಕ್ಷಿತ ಪಾಸ್‌ವರ್ಡ್ ರಚಿಸುವ ಅವಕಾಶವಿದೆ.
security ಆಯ್ಕೆಯನ್ನು ಕ್ಲಿಕ್ ಮಾಡಿದರೆ ನೀವು ಈ ವರೆಗೆ ಆಧಾರ್ ನಲ್ಲಿ ಮಾಡಿರುವ ಎಲ್ಲಾ ಬದಲಾವಣೆಗಳ ಇತಿಹಾಸವನ್ನು ನೋಡಬಹುದು. ಜೊತೆಗೆ ನಿಮ್ಮ ಆಧಾರ್ ಅಪ್ಲಿಕೇಶನ್‌ನ ಪಾಸ್‌ವರ್ಡ್ ಬದಲಿಸಲು ಅವಕಾಶವಿದೆ.
Services ಆಯ್ಕೆಯನ್ನು ಕ್ಲಿಕ್ ಮಾಡಿದರೆ, Mobile number update ಹಾಗೂ adress update ಸೇವೆಗಳು ಲಭ್ಯವಾಗುತ್ತದೆ.
ಮೊಬೈಲ್ ಸಂಖ್ಯೆ ಯನ್ನು ನವೀಕರಿಸಲು ಬಯಸಿದರೆ, ‘moblie number upate’ ಆಯ್ಕೆಯನ್ನು ಕ್ಲಿಕ್ ಮಾಡಿ. ಬಳಿಕ ‘continue to update moblie number’ ಆಯ್ಕೆ ಮಾಡಿ. ಆಧಾರ್ ನೊಂದಿಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ. ನವೀಕರಿಸಬೇಕಾದ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಹೊಸ ಸಂಖ್ಯೆಗೆ ಓಟಿಪಿ ಪಡೆಯಿರಿ. ನಂತರ ಯುಪಿಐ ಮೂಲಕ ನಿಗದಿತ ಶುಲ್ಕ ಪಾವತಿಸಿದರೆ ಮೊಬೈಲ್ ಸಂಖ್ಯೆ ನಿಗದಿತ ಅವಧಿಯೊಳಗೆ ನವೀಕರಣಗೊಳ್ಳುತ್ತದೆ.
ವಿಳಾಸವನ್ನು ಬದಲಿಸಲು ಬಯಸಿದರೆ, 'address update' ಆಯ್ಕೆ ಮಾಡಿರಿ. 'My documents' ಆಯ್ಕೆ ಮಾಡಿ. ಬಳಿಕ 'continue to update address' ಕ್ಲಿಕ್ ಮಾಡಿ . 'OTP' ದೃಢೀಕರಿಸಿ 'Continue' ಆಯ್ಕೆ ಮಾಡಿ. (ಮೇಲಿನ ಫೋಟೋದಲ್ಲಿ ತೋರಿಸಿರುವಂತೆ ಯಾವುದಾದರೂ ಒಂದು ದಾಖಲೆಯನ್ನು ಆಯ್ಕೆ ಮಾಡಿ.)
ದಾಖಲೆಯನ್ನು ಆಯ್ಕೆ ಮಾಡಿದ ನಂತರ ‘continue‘ ಮೇಲೆ ಕ್ಲಿಕ್ ಮಾಡಿ. ‘PDF’ ರೂಪದಲ್ಲಿರುವ ನಿಮ್ಮ ದಾಖಲೆಯನ್ನು ಅಪ್ಲೋಡ್ ಮಾಡಬಹುದು. ಅಥವಾ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬಹುದು. ನಿಮ್ಮ ಲಭ್ಯತೆಗೆ ಅನುಗುಣವಾಗಿ ‘scan document directly‘ ಅಥವಾ ‘select file to upload‘ ಯಾವುದಾದರೂ ಒಂದನ್ನು ಆರಿಸಿ ದಾಖಲೆ ಸಲ್ಲಿಸಿ ‘continue to add new address’ ಅನ್ನು ಆಯ್ಕೆ ಮಾಡಿರಿ.
ಬಳಿಕ ನಿಮ್ಮ ಮನೆ ವಿಳಾಸ, ಪಿನ್ ಕೋಡ್ ಜಿಲ್ಲೆ, ರಾಜ್ಯ, ಹಳ್ಳಿ, ಅಂಚೆ ಕಚೇರಿಯ ಮಾಹಿತಿಯನ್ನು ಭರ್ತಿ ಮಾಡಿ.ಮುಖ ಪರಿಶೀಲನೆ ಮಾಡಿರಿ. ನಿಗದಿತ ಶುಲ್ಕ ಪಾವತಿಸಿದರೆ ನಿಮ್ಮ ವಿಳಾಸ ಬದಲಾಗುತ್ತದೆ. (ನಿಮ್ಮ ನವೀಕರಣ ಯಾವ ಹಂತದಲ್ಲಿದೆ ಎಂದು ಪರಿಶೀಲಿಸಬಹುದು.)
ಆಧಾರ್ ಅಪ್ಲಿಕೇಶನ್ ಮುಖಪುಟದ ಮೇಲಿನ ಮೂಲೆಯಲ್ಲಿ ‘add profile’ ಕಾಣುತ್ತದೆ. ಅಲ್ಲಿ ನಿಮ್ಮ ಫೋಟೊ ಮೇಲೆ ಕ್ಲಿಕ್ ಮಾಡಿರಿ. ಬಳಿಕ ‘add a new profile in 2 step’ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ‘enter aadhaar number’ ಆಯ್ಕೆ ಮಾಡಿ. ನಂತರ ಕುಟುಂಬದ ಸದಸ್ಯರ ಆಧಾರ್ ಸಂಖ್ಯೆ ನಮೂದಿಸಿ ಅವರ ಮುಖ ಪರಿಶೀಲನೆ ಮಾಡಿದರೆ, ಅಪ್ಲಿಕೇಷನ್ ಜೊತೆ ಅವರ ಪ್ರೊಪೈಲ್ ಲಿಂಕ್ ಆಗುತ್ತದೆ. ಹೀಗೆ ಮನೆಯ 5 ಸದಸ್ಯರ ಆಧಾರ್ ಮಾಹಿತಿ ಸೇರಿಸಬಹುದು. ಜೊತೆಗೆ ಅವರ ಮೊಬೈಲ್ ನಂಬರ್ ಮತ್ತು ವಿಳಾಸವನ್ನು ನವೀಕರಿಸಬಹುದು.
ಅಪ್ಲಿಕೇಶನ್ ನ ಪುಖಪುಟದ ಮೇಲ್ಭಾಗದಲ್ಲಿ ಇರುವ ನಿಮ್ಮ ಪ್ರೊಪೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್‌ನ ಕ್ಯೂಆರ್ ಕೋಡ್ ಸೃಜನೆಯಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.