ದೇವದಾಸಿಯರ ಮಕ್ಕಳ ವಿವಾಹಕ್ಕೆ ಪ್ರೋತ್ಸಾಹ ಧನ ಎಂಬ ಯೋಜನೆಯನ್ನು ರಾಜ್ಯ ಸರ್ಕಾರದ ಬುಡಕಟ್ಟು ಕಲ್ಯಾಣ ಇಲಾಖೆ ಪ್ರಾರಂಭಿಸಿದೆ.
2019 ರ ನಂತರ ವಿವಾಹವಾದ ಪರಿಶಿಷ್ಟ ಪಂಗಡಕ್ಕೆ ಸೇರಿದ ದೇವದಾಸಿ ಸಮುದಾಯದ ದಂಪತಿಗಳಿಗೆ ₹8 ಲಕ್ಷ ಪ್ರೋತ್ಸಾಹ ಧನ ನೀಡಲಾಗುತ್ತದೆ.
ವರನಿಗೆ ₹3ಲಕ್ಷ ಹಾಗೂ ವಧುವಿಗೆ ₹5ಲಕ್ಷ ಪ್ರೋತ್ಸಾಹ ಧನ ನೀಡಲಾಗುತ್ತದೆ.
ಅರ್ಹತೆಗಳು
ದಂಪತಿಗಳು ಹಿಂದೂ ಧರ್ಮದವರಾಗಿದ್ದು, ಕರ್ನಾಟಕದಲ್ಲಿ ವಾಸಿಸುತ್ತಿರಬೇಕು
ದಂಪತಿಗಳ ಒಟ್ಟು ವಾರ್ಷಿಕ ಆದಾಯ ₹5ಲಕ್ಷಕ್ಕಿಂತ ಕಡಿಮೆ ಇರಬೇಕು
ವಿವಾಹವಾಗಿ 18 ತಿಂಗಳ ಒಳಗಾಗಿ ಅರ್ಜಿ ಸಲ್ಲಿಸಿದವರು ಮಾತ್ರ ಯೋಜನೆಗೆ ಅರ್ಹರು
ಈ ಯೋಜನೆಯನ್ನು ಪಡೆಯಲು ಒಬ್ಬ ಸಂಗಾತಿಯು ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು
ಅರ್ಜಿ ಸಲ್ಲಿಸುವ ಪ್ರಕ್ರಿಯೆ
ಹಂತ 1: ಕರ್ನಾಟಕ ಸರ್ಕಾರದ ಬುಡಕಟ್ಟು ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ಸ್ಕ್ರೀನ್ ಬಲ ಭಾಗದಲ್ಲಿ, "ದೇವದಾಸಿ ಮಕ್ಕಳ ವಿವಾಹಕ್ಕೆ ಪ್ರೋತ್ಸಾಹ ಧನ‘ ಎಂಬ ಗುಂಡಿಯನ್ನು ಒತ್ತಿ.
ಹಂತ 3: ಯೋಜನೆಯ ಮುಖಪುಟದ ಕೆಳ ಭಾಗದಲ್ಲಿರುವ ನೋಂದಣಿಯನ್ನು ಆಯ್ಕೆ ಮಾಡಿ.
ಹಂತ 4: ಆನ್‌ಲೈನ್ ನೋಂದಣಿಯಲ್ಲಿ, ಅರ್ಜಿಯ ಎಲ್ಲಾ ಕ್ಷೇತ್ರಗಳನ್ನು ಭರ್ತಿ ಮಾಡಿ
ಹಂತ 5: ನೀವು ಒದಗಿಸಿದ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ. ಅರ್ಜಿ ಪೂರ್ಣಗೊಂಡ ಬಳಿಕ "ಸಲ್ಲಿಸು" ಎಂಬುವುದನ್ನು ಒತ್ತಿ. ನಂತರ ನೀವು ಇಲಾಖೆಯಿಂದ ಎಸ್ಎಂಎಸ್ ಮೂಲಕ ದೃಢೀಕರಣ ಸಂದೇಶವನ್ನು ಸ್ವೀಕರಿಸುತ್ತೀರಿ
ಹಂತ 6: ಉಲ್ಲೇಖಕ್ಕಾಗಿ ಸ್ವೀಕೃತಿ ನಮೂನೆಯ ಮುದ್ರಣವನ್ನು ತೆಗೆದುಕೊಳ್ಳಿ
ಅಗತ್ಯವಿರುವ ದಾಖಲೆಗಳು
ಆಧಾರ್ ಕಾರ್ಡ್
ಬ್ಯಾಂಕ್ ಖಾತೆ ವಿವರಗಳು
ವಿವಾಹ ನೋಂದಣಿ ಪ್ರಮಾಣಪತ್ರ
ದಂಪತಿ ಭಾವಚಿತ್ರ
ಆದಾಯ ಪ್ರಮಾಣಪತ್ರ ಸಂಖ್ಯೆ
ಜಾತಿ ಪ್ರಮಾಣಪತ್ರ ಸಂಖ್ಯೆ
ಮೊಬೈಲ್ ಸಂಖ್ಯೆ
ನಿವಾಸಿ ಪುರಾವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.