ADVERTISEMENT

ಸ್ವಂತ ಉದ್ಯೋಗಕ್ಕಾಗಿ ಅಲ್ಪಸಂಖ್ಯಾತರಿಗೆ ವೃತ್ತಿ ಪ್ರೋತ್ಸಾಹ ಸಾಲ: ಇಲ್ಲಿದೆ ವಿವರ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 5:08 IST
Last Updated 25 ಸೆಪ್ಟೆಂಬರ್ 2025, 5:08 IST
   

ಜೈನ್‌, ಸಿಖ್‌, ಮುಸ್ಲಿಂ, ಕ್ರೈಸ್ತ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಲ್ಲಿ ಉದ್ಯೋಗ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ‘ವೃತ್ತಿ ಪ್ರೋತ್ಸಾಹ ಸಾಲ ಯೋಜನೆ‘ಯನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆ ಮೂಲಕ ಈ ಸಮುದಾಯಗಳ ಆಸಕ್ತರು -ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.

‘ವೃತ್ತಿ ಪ್ರೋತ್ಸಾಹ‘ ಸಾಲದಲ್ಲಿ ₹1ಲಕ್ಷ ನೀಡುತ್ತಿದ್ದು ಅದರಲ್ಲಿ ಶೇ 50 ಸಾಲದ ರೂಪದಲ್ಲಿ ಶೇ 50 ಸಬ್ಸಿಡಿಯಲ್ಲಿ ನೀಡಲಾಗುತ್ತದೆ.

ADVERTISEMENT

ಅರ್ಹತೆಗಳು

ಅರ್ಜಿದಾರರು ಕರ್ನಾಟಕದವರಾಗಿದ್ದು, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು.

18 ರಿಂದ 55 ವಯಸ್ಸಿನವರಾಗಿರಬೇಕು

ಕುಟುಂಬದ ವಾರ್ಷಿಕ ಆದಾಯವು ನಗರ ಪ್ರದೇಶಗಳಲ್ಲಿ ₹1ಲಕ್ಷಕ್ಕಿಂತ ಕಡಿಮೆ ಹಾಗೂ ಗ್ರಾಮೀಣ ಭಾಗದಲ್ಲಿ ₹81 ಸಾವಿರಕ್ಕಿಂತ ಕಡಿಮೆ ಇರಬೇಕು

ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ರಾಜ್ಯ– ಕೇಂದ್ರ ಸರ್ಕಾರಿ ಉದ್ಯೋಗಿಯಾಗಿರಬಾರದು.

ಕುಟುಂಬದ ಸದಸ್ಯರು ಕಳೆದ 5 ವರ್ಷಗಳಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ (ಕೆಎಂಡಿಸಿಎಲ್‌) ಅನ್ನು ಹೊರತುಪಡಿಸಿ ಬೇರೆ ಯಾವುದೇ ಯೋಜನೆಯಡಿಯಲ್ಲಿ ಪ್ರಯೋಜನಗಳನ್ನು ಪಡೆದಿರಬಾರದು.

ಅರ್ಜಿ ಸಲ್ಲಿಸುವ ಪ್ರಕ್ರಿಯೆ

ಹಂತ 1: ಅರ್ಜಿದಾರರು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕೃತ https://kmdconline.karnataka.gov.in/Portal/home ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 2: ಸ್ಕ್ರೀನ್ ಮೇಲೆ ಕಾಣುವ ಅರ್ಜಿ ಸಲ್ಲಿಸಿ ಎಂಬ ಗುಂಡಿನ್ನು ಒತ್ತಿ. ನಂತರ ‘ಮೊಬೈಲ್ ಸಂಖ್ಯೆ‘ ನಮೂದಿಸಿದ ಬಳಿಕ ‘ಸಲ್ಲಿಸು‘ ಎಂಬುವುದನ್ನು ಒತ್ತಿ.

ಹಂತ 3: ನಂತರ ‘ಆಧಾರ್ ಸಂಖ್ಯೆ‘ ನಮೂದಿಸಿ, ‘ಕ್ಯಾಪ್ಚಾ‘ ಅನ್ನು ಭರ್ತಿ ಮಾಡಿದ ನಂತರ "ಮುಂದೆ" ಆಯ್ಕೆಮಾಡಿ.

ಹಂತ 4: ಅರ್ಜಿದಾರರ ಆಧಾರ್ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ, ನಂತರ ‘ಮುಂದುವರಿಸಿ‘ ಆಯ್ಕೆಮಾಡಿ.

ಹಂತ 5: ಆಧಾರ್ ಹಾಗೂ ಒಟಿಪಿ ಪರಿಶೀಲಿಸಿದ ನಂತರ ‘ಸಲ್ಲಿಸು‘ ಎಂಬ ಗುಂಡಿಯನ್ನು ಒತ್ತಿ.

ಹಂತ 6: "ಸಿಖ್ಲಿಗರ್ ಸಮುದಾಯ ಅಭಿವೃದ್ಧಿ ಯೋಜನೆ" ಎಂಬುವುದನ್ನು ಆಯ್ಕೆ ಮಾಡಿದ ನಂತರ ಕೇಳಿದ ವಿವರಗಳನ್ನು ಭರ್ತಿ ಮಾಡಿ.

ಹಂತ 7: ‘ಮುಂದಿನದು‘ ಆಯ್ಕೆಮಾಡಿ, ವಿಳಾಸದ ವಿವರವನ್ನು ಭರ್ತಿ ಮಾಡಿ.

ಹಂತ 8: ನಂತರ ಪಾಸ್‌ಪೋರ್ಟ್ ಗಾತ್ರದ ಫೋಟೋ, ಶೈಕ್ಷಣಿಕ ದಾಖಲೆ, ಆದಾಯ ಪ್ರಮಾಣಪತ್ರವನ್ನು ನಮೂದಿಸಿ.

ಹಂತ 10: ‘ಮುಂದುವರಿಸಿ‘ ಎಂಬ ಗುಂಡಿನ್ನು ಒತ್ತಿ. ‘ಅರ್ಜಿ ಸಲ್ಲಿಸಿ‘ ಆಯ್ಕೆಮಾಡಿದ ಬಳಿಕ ಅರ್ಜಿ ಐಡಿ ಪಡೆಯಿರಿ.

ಅಗತ್ಯವಿರುವ ದಾಖಲೆಗಳು

ಅಲ್ಪಸಂಖ್ಯಾತ ಪ್ರಮಾಣಪತ್ರ

ಆದಾಯ ಪ್ರಮಾಣ ಪತ್ರ

ಆಧಾರ್ ಕಾರ್ಡ್

ಬ್ಯಾಂಕ್ ಖಾತೆಯ ವಿವರ

ಸ್ವಯಂ ಘೋಷಣಾ ಜಾಮೀನು ಪ್ರಮಾಣ ಪತ್ರ

ಸ್ವಯಂ ಘೋಷಣಾ ಪ್ರಮಾಣ ಪತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.