ADVERTISEMENT

ಸ್ವ–ಉದ್ಯೋಗಕ್ಕೆ ಸಿಗಲಿದೆ ಸಾಲ ಸೌಲಭ್ಯ: ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಸೆಪ್ಟೆಂಬರ್ 2025, 11:17 IST
Last Updated 11 ಸೆಪ್ಟೆಂಬರ್ 2025, 11:17 IST
<div class="paragraphs"><p>ಕಾಲ್ಪನಿಕ ಚಿತ್ರ</p></div>

ಕಾಲ್ಪನಿಕ ಚಿತ್ರ

   
ಈ ಯೋಜನೆಯಡಿ ಸಾಲ ಪಡೆದು ಗೃಹ ಉದ್ಯಮವನ್ನು ಮಾಡಬಹುದು. ಬುಕ್‌ ಬೈಂಡಿಗ್‌, ನೋಟ್‌ಬುಕ್‌ ತಯಾರಿಕೆ, ಸೀಮೆಸುಣ್ಣ ತಯಾರಿಕೆ, ಜಾಮ್, ಜೆಲ್ಲಿ, ಉಪ್ಪಿನಕಾಯಿ ತಯಾರಿಕೆ, ಸೀರೆ ಹಾಗೂ ಕಸೂತಿ ಕೆಲಸ, ಉಣ್ಣೆಯ ಬಟ್ಟೆ ತಯಾರಿಕೆ ಮಾಡುವ ಮಹಿಳೆಯರಿಗೆ ಈ ಯೋಜನೆ ಸಹಕಾರಿಯಾಗಲಿದೆ ಎಂದು ಇಲಾಖೆಯು ತನ್ನ ಅಂತರ್ಜಾಲ ತಾಣದಲ್ಲಿ ತಿಳಿಸಿದೆ. 

ಕರ್ನಾಟಕ ಸರ್ಕಾರ ಜಾರಿ ಮಾಡಿರುವ ವಿವಿಧ ಯೋಜನೆಗಳಲ್ಲಿ ಉದ್ಯೋಗಿನಿ ಯೋಜನೆಯೂ ಒಂದಾಗಿದೆ. ಈ ಯೋಜನೆಯನ್ನು 1997–1998ರಲ್ಲಿ ಆರಂಭಿಸಲಾಯಿತು. ನಂತರ 2004–2005ರಲ್ಲಿ ತಿದ್ದುಪಡಿಯನ್ನು ತರಲಾಯಿತು. ಮಹಿಳೆಯರಿಗೆ ಸ್ವ–ಉದ್ಯೋಗ ಕೈಗೊಳ್ಳಲು ಹಣಕಾಸು ನೆರವನ್ನು ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಗಳಿಂದ ಸಾಲ ಹಾಗೂ ಸಹಾಯಧನ ಈ ಯೋಜನೆಗೆ ಲಭ್ಯವಿದೆ. ಜಿಲ್ಲಾ ಸಹಕಾರಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಂದ ಸಾಲ ಪಡೆಯಬಹುದು. 

ADVERTISEMENT

ಈ ಯೋಜನೆಯಡಿ ಸಾಲ ಪಡೆದು ಗೃಹ ಉದ್ಯಮವನ್ನು ಮಾಡಬಹುದು. ಬುಕ್‌ ಬೈಂಡಿಗ್‌, ನೋಟ್‌ಬುಕ್‌ ತಯಾರಿಕೆ, ಸೀಮೆಸುಣ್ಣ ತಯಾರಿಕೆ, ಜಾಮ್, ಜೆಲ್ಲಿ, ಉಪ್ಪಿನಕಾಯಿ ತಯಾರಿಕೆ, ಸೀರೆ ಮತ್ತು ಕಸೂತಿ ಕೆಲಸ ಮತ್ತು ಉಣ್ಣೆಯ ಬಟ್ಟೆ ತಯಾರಿಕೆ ಮಾಡುವ ಮಹಿಳೆಯರಿಗೆ ಈ ಯೋಜನೆ ಸಹಕಾರಿಯಾಗಲಿದೆ ಎಂದು ಇಲಾಖೆಯು ತನ್ನ ಅಂತರ್ಜಾಲ ತಾಣದಲ್ಲಿ ತಿಳಿಸಿದೆ. 

ಉದ್ಯೋಗಿನಿ ಯೋಜನೆಯ ಪ್ರಯೋಜನಗಳೇನು?

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯರಿಗೆ, ಕನಿಷ್ಠ ₹1 ಲಕ್ಷದಿಂದ ಗರಿಷ್ಠ ₹3 ಲಕ್ಷದ ವರೆಗೂ ಸಾಲ ಸಿಗಲಿದೆ. ಸಾಲದಲ್ಲಿ ಶೇ 50 ರಷ್ಟು ಸಹಾಯಧನವಿದ್ದು, ಇದನ್ನು ಪಡೆಯಲು ಕುಟುಂಬದ ವಾರ್ಷಿಕ ಆದಾಯ ₹2 ಲಕ್ಷಕ್ಕಿಂತ ಕಡಿಮೆ ಇರಬೇಕು.

  • ವಿಶೇಷ ವರ್ಗ ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ ಮಹಿಳೆಯರಿಗೆ ₹3 ಲಕ್ಷದ ವರೆಗೂ ಸಾಲ ದೊರೆಯಲಿದೆ. ಸರ್ಕಾರದಿಂದ ಶೇ 30 ರಷ್ಟು ಅಥವಾ ₹90 ಸಾವಿರದ ವರೆಗೆ ಸಹಾಯಧನ ಸಿಗಲಿದೆ.

ಯೋಜನೆಯನ್ನು ಪಡೆಯಲು ಇರಬೇಕಾದ ಅರ್ಹತೆಗಳೇನು?

  • ಮಹಿಳೆಯರು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು.

  • ಸಾಮಾನ್ಯ ಅಥವಾ ವಿಶೇಷ ವರ್ಗಗಳಿಗೆ ಸೇರಿದ ಕುಟುಂಬದ ಆದಾಯ ₹ 1.5 ಲಕ್ಷಕ್ಕಿಂತ ಕಡಿಮೆ ಇರಬೇಕು. ವಿಧವೆ ಅಥವಾ ಅಂಗವಿಕಲ ಮಹಿಳೆಯರಿಗೆ ಕುಟುಂಬದ ಆದಾಯದ ಮೇಲೆ ಯಾವುದೇ ಮಿತಿಯಿಲ್ಲ.

  • ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು.

  • ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಯೋಜನೆಯಲ್ಲಿ ಸಿಗುವ ಆದ್ಯತೆಗಳೇನು?

  • ಅತ್ಯಂತ ಬಡವರು, ನಿರ್ಗತಿಕರು, ವಿಧವೆಯರು ಮತ್ತು ದೈಹಿಕವಾಗಿ ಅಶಕ್ತರಿಗೆ ಮೊದಲ ಆದ್ಯತೆ.

  • ಕೆಎಸ್‌ಡಬ್ಲ್ಯೂಡಿಸಿ,ಇಲಾಖೆಯಿಂದ ನಡೆಸಲಾದ ಪೂರ್ವ ಕೌಶಲ ಅಭಿವೃದ್ಧಿ ತರಬೇತಿ ಅಥವಾ ವೃತ್ತಿಪರ ತರಬೇತಿಯನ್ನು ಪಡೆದ ಅಭ್ಯರ್ಥಿಗಳಿಗೆ ಆದ್ಯತೆ ಹೆಚ್ಚು.

ಅಗತ್ಯವಿರುವ ದಾಖಲೆಗಳೇನು?

  • ಮೂರು ಪಾಸ್‌ಪೋರ್ಟ್ ಫೋಟೋ.

  • ಸಾಲ ಪಡೆಯಲು ಬಯಸುವ ಉದ್ಯಮದ ಕುರಿತ ತರಬೇತಿ ಅಥವಾ ಅನುಭವದ ಪ್ರಮಾಣಪತ್ರ.

  • ನಿಮ್ಮ ಉದ್ಯಮದ ಕುರಿತ ಕಿರು ಪ್ರಸ್ತಾವನೆ.

  • ಪಡಿತರ ಚೀಟಿ ಅಥವಾ ಮತದಾರರ ಗುರುತಿನ ಚೀಟಿ.

  • ಆದಾಯ ಪ್ರಮಾಣಪತ್ರ.

  • ಜಾತಿ ಪ್ರಮಾಣಪತ್ರ (SC/ST ಅರ್ಜಿದಾರರಾಗಿದ್ದರೆ).

  • ಉದ್ಯಮಕ್ಕೆ ಅಗತ್ಯ ಯಂತ್ರೋಪಕರಣಗಳು, ಸಲಕರಣೆಗಳು ಹಾಗೂ ಇತರ ವೆಚ್ಚಗಳ ಉಲ್ಲೇಖವುಳ್ಳ ಪ್ರಸ್ತಾವನೆ

ಅರ್ಜಿಸಲ್ಲಿಸುವುದು ಹೇಗೆ? 

  • ಅರ್ಜಿ ಸಲ್ಲಿಸಲು ಮೇಲೆ ತಿಳಿಸಲಾದ ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್‌ಗೆ ಭೇಟಿ ನೀಡುವುದು. ಅಲ್ಲಿ ನೀಡಲಾಗುವ ಅರ್ಜಿಯ ನಮೂನೆಯನ್ನು ಭರ್ತಿ ಮಾಡಬೇಕು. 

  • ಭರ್ತಿ ಮಾಡಿದ ಅರ್ಜಿಯನ್ನು ಬ್ಯಾಂಕ್ ಅಥವಾ ಕೆಎಸ್‌ಎಫ್‌ಸಿ ಶಾಖೆಗೆ ಸಲ್ಲಿಸಬೇಕು. ಕೆಎಸ್‌ಎಫ್‌ಸಿ ಅಧಿಕಾರಿಗಳು ನೀವು ಸಲ್ಲಿಕೆ ಮಾಡಿದ ಅರ್ಜಿಯನ್ನು ಪರಿಶೀಲಿಸಿ ಸಾಲದ ನೀಡಲು ಅನುಮೋದನೆ ಮಾಡುತ್ತಾರೆ. 

  • ನಂತರ ಬ್ಯಾಂಕ್‌ಗಳು ನಿಗಮಕ್ಕೆ ಸಹಾಯಧನವನ್ನು ಕೋರಿ ಅರ್ಜಿ ಸಲ್ಲಿಸಿ, ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡುತ್ತವೆ.  

ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ಅಥವಾ ಸ್ಥಳೀಯ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.