ADVERTISEMENT

‘ಪ್ರತಿ ಬಾರಿ ರೋಹಿತ್‌, ಕೊಹ್ಲಿ ಅವಲಂಬನೆ ಸಲ್ಲ’

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 19:37 IST
Last Updated 10 ಜುಲೈ 2019, 19:37 IST
ವಿರಾಟ್ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ
ವಿರಾಟ್ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ   

ಮ್ಯಾಂಚೆಸ್ಟರ್‌: ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ರವೀಂದ್ರ ಜಡೇಜ ಅವರ ಸ್ಫೂರ್ತಿಯುತ ಹೋರಾಟವನ್ನು ಸಚಿನ್‌ ತೆಂಡೂಲ್ಕರ್‌ ಪ್ರಶಂಸಿಸಿದ್ದಾರೆ. ಇದೇ ವೇಳೆ, ‘ಗೆಲುವಿಗಾಗಿ ಪ್ರತಿ ಬಾರಿ ಮೇಲಿನ ಕ್ರಮಾಂಕದ ಖ್ಯಾತನಾಮ ಆಟಗಾರರನ್ನೇಪ್ರತಿ ಬಾರಿ ಅವಲಂಬಿ ಸಬಾರದು’ ಎಂದೂ ಕಿವಿಮಾತು‌ ಹೇಳಿದ್ದಾರೆ.

240 ರನ್‌ಗಳ ಗುರಿ ಬೆನ್ನತ್ತುವಾಗ ಇಲಿಯನ್ನು ಹಿಡಿಯಲು ಗುಡ್ಡಕಡಿಯವ ರೀತಿ ಭಾರತ ಆಟವಾಡಿತು ಎಂದು ನಿರಾಶರಾದಂತೆ ಕಂಡುಬಂದ ಸಚಿನ್‌ ಹೇಳಿದರು.

‘ನಿಸ್ಸಂದೇಹವಾಗಿ ನಾವು 240 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ತಲುಪಬಹುದಿತ್ತು. ಅದೇನೂ ಅಂಥ ದೊಡ್ಡ ಮೊತ್ತವಾಗಿರಲಿಲ್ಲ. ಆದರೆ ಮೂರು ಪ್ರಮುಖ ವಿಕೆಟ್‌ಗಳನ್ನು ಆರಂಭದಲ್ಲೇ ಪಡೆದ ನ್ಯೂಜಿಲೆಂಡ್‌ಗೆ ಕನಸಿನಲ್ಲೂ ಎಣಿಸದ ಆರಂಭ ದೊರೆಯಿತು’ ಎಂದರು.

ADVERTISEMENT

‘ಆದರೆ ಪ್ರತಿ ಬಾರಿ ಭದ್ರ ಬುನಾದಿಗೆ ರೋಹಿತ್‌ ಅಥವಾ ವಿರಾಟ್ ಅವರನ್ನು ಅವಲಂಬಿಸಬಾರದು. ಅವರ ನಂತರ ಬರುವ ಆಟಗಾರರೂ ಹೊಣೆಯರಿತು ಆಟವಾಡಬೇಕು’ ಎಂದು ಸಚಿನ್‌ ‘ಇಂಡಿಯಾ ಟುಡೇ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.