ADVERTISEMENT

ರೋಹಿತ್‌–ಕೊಹ್ಲಿಯನ್ನು ಟೀಕಿಸುವವರು ಜಿರಳೆಗಳು: ಡಿವಿಲಿಯರ್ಸ್

ಪಿಟಿಐ
Published 28 ಅಕ್ಟೋಬರ್ 2025, 12:20 IST
Last Updated 28 ಅಕ್ಟೋಬರ್ 2025, 12:20 IST
<div class="paragraphs"><p>ಎಬಿ ಡಿವಿಲಿಯರ್ಸ್</p></div>

ಎಬಿ ಡಿವಿಲಿಯರ್ಸ್

   

ಮುಂಬೈ: ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಬ್ಬರು ಪ್ರತಿಭಾವಂತರ ಪೀಳಿಗೆಯ ಅತ್ಯುತ್ತಮ ಜೋಡಿ. ಅವರ ಅದ್ಭುತ ಕ್ರಿಕೆಟ್ ವೃತ್ತಿಜೀವನದ ಉಳಿದ ಭಾಗವನ್ನು ಅಭಿಮಾನಿಗಳು ಸಂಭ್ರಮಿಸಬೇಕು. ಅವರನ್ನು ಟೀಕಿಸುವವರು ‘ಜಿರಳೆಗಳು’ ಎಂದು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎ.ಬಿ. ಡಿವಿಲಿಯರ್ಸ್ ಕರೆದಿದ್ದಾರೆ.

ಟಿ20ಐ ಹಾಗೂ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಏಕದಿನ ಮಾದರಿಯಲ್ಲಿ ಮಾತ್ರ ಟೀಂ ಇಂಡಿಯಾದ ಭಾಗವಾಗಿದ್ದಾರೆ.

ADVERTISEMENT

ಇತ್ತೀಚೆಗೆ ಮುಕ್ತಾಯಗೊಂಡ ಆಸೀಸ್ ಸರಣಿಯು ತಮ್ಮ ಕ್ರಿಕೆಟ್ ವೃತ್ತಿ ಜೀವನದ ಕೊನೆಯ ಆಸ್ಟ್ರೇಲಿಯಾ ಪ್ರವಾಸವಾಗಿತ್ತು. ಇದನ್ನು ಭಾರತ 1–2ರ ಅಂತರದಲ್ಲಿ ಸೋಲು ಅನುಭವಿಸಿದೆ. ಆದರೆ, ಕೊಹ್ಲಿ ಮತ್ತು ರೋಹಿತ್ ಉತ್ತಮ ಪ್ರದರ್ಶನ ನೀಡಿದ್ದಾರೆ. ವಿರಾಟ್ ಕೊಹ್ಲಿ ಅಂತಿಮ ಪಂದ್ಯದಲ್ಲಿ ಅಜೇಯ 74 ರನ್ ಗಳಿಸಿದರೆ, ರೋಹಿತ್ ಎರಡನೇ ಪಂದ್ಯದಲ್ಲಿ 73 ಹಾಗೂ ಕೊನೆಯ ಪಂದ್ಯದಲ್ಲಿ ಆಕರ್ಷಕ 121 ರನ್ ಸಿಡಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಈ ಇಬ್ಬರ ಪ್ರದರ್ಶನದ ಕುರಿತು ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಡಿವಿಲಿಯರ್ಸ್ ‘ರೋಹಿತ್ ಮತ್ತೊಂದು ಶತಕ...ಕೊಹ್ಲಿ ಕೂಡ ಮತ್ತೆ ರನ್ ಗಳಿಸುತ್ತಿದ್ದಾರೆ. ಮುಂದೆ ಏನಾಗಿಲಿದೆ ಎಂಬುದನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇನೆ’ ಎಂದಿದ್ದಾರೆ.

‘ನೀವು ನಿಜವಾದ ಕ್ರಿಕೆಟ್ ಅಭಿಮಾನಿಯಾಗಿದ್ದರೆ ಇಂತಹ ಆಟಗಾರರನ್ನು ಸಂಭ್ರಮಿಸಬೇಕು. ಇಂತಹ ಆಟಗಾರರು ನಮ್ಮ ಕಾಲದಲ್ಲಿ ಹೆಚ್ಚಾಗಿ ಸಿಗುವುದಿಲ್ಲ. ಇವರದ್ದು ನಮ್ಮಲ್ಲಿನ ಪ್ರತಿಭೆಗಳ ಪೀಳಿಗೆಯ ಸಂಯೋಜನೆ. ಮುಂದಿನ ದಿನಗಳಲ್ಲಿ ಅವರು ಎಷ್ಟು ವರ್ಷ ಕ್ರಿಕೆಟ್ ಆಡಿದರೂ ಅದನ್ನು ಸಂಭ್ರಮಿಸುವುದು ಮತ್ತು ಅವರ ಆಟವನ್ನು ಆನಂದಿಸುವುದು ನಮಗೆ ಅವಶ್ಯಕವಾಗಿದೆ’ ಎಂದು ಅವರು ಹೇಳಿದ್ದಾರೆ.

ಟೀಕಾಕಾರಿಗೂ ಖಡಕ್ ತಿರುಗೇಟು

‘ಟೀಕಿಸುವವರ ಬಗ್ಗೆ ಏನು ಹೇಳಬೇಕು ಎಂದು ನನಗೆ ತಿಳಿಯುತ್ತಿಲ್ಲ. ಅವರನ್ನು ಮನುಷ್ಯರು ಅಂತ ಕರೆಯಬೇಕಾ ಎಂದು ಕೂಡ ನನಗೆ ತಿಳಿಯುತ್ತಿಲ್ಲ. ಆದರೆ, ಆಟಗಾರರಿಗೆ ಸ್ವಲ್ಪ ಹಿನ್ನಡೆಯಾದರೆ ಸಾಕು ‘ಜಿರಳೆಗಳು’ ರಂಧ್ರಗಳಿಂದ ಹೊರಬರುತ್ತವೆ’ ಎಂದು ಕಿಡಿಕಾರಿದರು.

‘ರೋಹಿತ್ ಮತ್ತು ಕೊಹ್ಲಿಯನ್ನು ಟೀಕಿಸುವವರ ಸಂಖ್ಯೆ ತೀರಾ ಕಮ್ಮಿ ಇದೆ. ಅವರನ್ನು ನಾನು ಅಲ್ಪಸಂಖ್ಯಾತರು ಎಂದು ಕರೆಯುತ್ತೇನೆ ಮತ್ತು ಅವರ ಬಗ್ಗೆ ನಾನು ಮಾತನಾಡಲ್ಲ. ಆದರೆ, ಅತೀ ಹೆಚ್ಚು ಜನರು ಈ ಇಬ್ಬರ ಅದ್ಭುತ ವೃತ್ತಿಜೀವನವನ್ನು ಸಂಭ್ರಮಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಮತ್ತು ಅದಕ್ಕೆ ಇದು ಅದ್ಭುತ ಸಮಯ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.