ಅಭಿಷೇಕ್ ಶರ್ಮಾ, ವರುಣ್ ಚಕ್ರವರ್ತಿ
(ಪಿಟಿಐ ಚಿತ್ರ)
ದುಬೈ: ಬೀಸು ಹೊಡೆತಗಳ ಆಟಗಾರ ಅಭಿಷೇಕ್ ಶರ್ಮಾ ಮತ್ತು ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಬುಧವಾರ ಪ್ರಕಟವಾದ ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ಕ್ರಮವಾಗಿ ಬ್ಯಾಟರ್‌ಗಳ ಮತ್ತು ಬೌಲರ್‌ಗಳ ವಿಭಾಗದಲ್ಲಿ ಜೀವನ ಶ್ರೇಷ್ಠ ಎರಡನೇ ಕ್ರಮಾಂಕ ಕಾಪಾಡಿ ಕೊಂಡಿದ್ದಾರೆ.
ಬೀಸಾಟದ ಆಟಗಾರ ತಿಲಕ್ ವರ್ಮಾ ಮತ್ತು ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾ ನದಲ್ಲಿದ್ದಾರೆ.
ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ 856 ಪಾಯಿಂಟ್‌ಗಳೊಡನೆ ಮೊದಲ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ನ ಫಿಲ್ ಸಾಲ್ಟ್ (815) ಮೂರನೇ ಸ್ಥಾನದಲ್ಲಿದ್ದಾರೆ. ಅಭಿಷೇಕ್ ವರ್ಮಾ 829 ಮತ್ತು ತಿಲಕ್ ವರ್ಮಾ 804 ಹಾಗೂ ಸೂರ್ಯಕುಮಾರ್ 739 ಪಾಯಿಂಟ್ಸ್ ಹೊಂದಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರು 252 ಪಾಯಿಂಟ್‌ಗಳೊಡನೆ ಆಲ್‌ರೌಂಡರ್‌ಗಳ ವಿಭಾಗದಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ನೇಪಾಳದ ದೀಪೇಂದ್ರ ಸಿಂಗ್ ಐರೀ (233) ಎರಡನೇ ಮತ್ತು ಆಸ್ಟ್ರೇಲಿಯಾದ ಮಾರ್ಕಸ್ ಸ್ಟೊಯಿನಿಸ್ (210) ಮೂರನೇ ಸ್ಥಾನದಲ್ಲಿದ್ದಾರೆ.
ಬೌಲರ್‌ಗಳ ಯಾದಿಯಲ್ಲಿ ವೆಸ್ಟ್ ಇಂಡೀಸ್‌ನ ಅಖೀಲ್ ಹುಸೇನ್ (707) ಅಗ್ರಸ್ಥಾನದಲ್ಲಿದ್ದಾರೆ. ಚಕ್ರವರ್ತಿ (706) ಕೇವಲ ಒಂದು ಪಾಯಿಂಟ್ ಹಿಂದೆಯಿದ್ದಾರೆ.
ಇಂಗ್ಲೆಂಡ್‌ನ ಲೆಗ್ ಸ್ಪಿನ್ನರ್ ಅದಿಲ್ ರಶೀದ್ (705), ಶ್ರೀಲಂಕಾದ ವನಿಂದು ಹಸರಂಗ (700) ಮತ್ತು ಆಸ್ಟ್ರೇಲಿಯಾದ ಆ್ಯಡಂ ಜಂಪಾ (694) ನತರ ಮೂರರಿಂದ ಐದರವರೆಗಿನ ಸ್ಥಾನಗಳಲ್ಲಿ ಇದ್ದಾರೆ. ಗೂಗ್ಲಿ ಬೌಲರ್ ರವಿ ಬಿಷ್ಣೋಯಿ (674) ಆರನೇ ಮತ್ತು ಎಡಗೈ ವೇಗಿ ಅರ್ಷದೀಪ್ ಸಿಂಗ್ (653) ಒಂಬತ್ತನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.