ಅಭಿಷೇಕ್ ಶರ್ಮಾ
ಚಿತ್ರ: @tamizhuu
ಕೋಲ್ಕತ್ತ: ಇಲ್ಲಿನ ಈಡೆನ್ ಗಾರ್ಡನ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡದ ಅಭಿಷೇಕ್ ಶರ್ಮಾ ಬ್ಯಾಟಿಂಗ್ ಜೊತೆ ಕ್ಷೇತ್ರರಕ್ಷಣೆಯಲ್ಲಿ ಎಡವಿದರು.
ಎರಡು ಕ್ಯಾಚ್ ಕೈಚೆಲ್ಲಿದ ಅಭಿಷೇಕ್
ಭಾರತ ತಂಡದ ಪ್ರಮುಖ ಆಟಗಾರ ಅಭಿಷೇಕ್ ಶರ್ಮಾ ಅವರು ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಈ ನಡುವೆ ಇಂದಿನ (ಭಾನುವಾರ) ನಿರ್ಣಾಯಕ ಪಂದ್ಯದಲ್ಲಿ ಎರಡು ಪ್ರಮುಖ ಕ್ಯಾಚ್‌ಗಳನ್ನು ಕೈಚೆಲ್ಲುವ ಮೂಲಕ ವಿಂಡೀಸ್ ಬೃಹತ್ ಮೊತ್ತ ಕಲೆಹಾಕಲು ಕಾರಣರಾದರು.
ಪಂದ್ಯದ ಆರಂಭದಲ್ಲಿ ಜಸ್‌ಪ್ರೀತ್ ಬುಮ್ರಾ ಅವರ ಮೊದಲ ಓವರ್‌ನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದ ವಿಂಡೀಸ್ ಆರಂಭಿಕ ಬ್ಯಾಟರ್ ರೋಸ್ಟನ್ ಚೇಸ್ ಅವರು ಅಭಿಷೇಕ್ ಶರ್ಮಾ ಅವರಿಗೆ ಸುಲಭದ ಕ್ಯಾಚ್ ನೀಡುತ್ತಾರೆ. ಆದರೆ, ಮಿಡ್ ಆನ್‌ನಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಅಭಿಷೇಕ್ ಅವರು ಕ್ಯಾಚ್ ಕೈಚೆಲ್ಲುತ್ತಾರೆ. ಸಿಕ್ಕ ಅವಕಾಶ ಬಳಸಿಕೊಂಡ ಚೇಸ್ 25 ಎಸೆತಗಳಲ್ಲಿ 40 ರನ್ ಸಿಡಿಸುತ್ತಾರೆ.
ಮಾತ್ರವಲ್ಲ, ಕೊನೆ ಓವರ್‌ಗಳಲ್ಲಿ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದ ರೋವ್‌ಮನ್ ಪೋವೆಲ್ ಅವರು ಬಾಲ್ ಅನ್ನು ಲಾಂಗ್ ಆನ್‌ನತ್ತ ಬಾರಿಸುತ್ತಾರೆ. ಆದರೆ, ಅಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಅಭಿಷೇಕ್ ಶರ್ಮಾ ಸುಲಭ ಕ್ಯಾಚ್ ಕೈಚೆಲ್ಲುತ್ತಾರೆ. ಇದನ್ನು ಬಳಸಿಕೊಂಡ ಪೋವೆಲ್ ಅಜೇಯ 34 ರನ್ ಸಿಡಿಸಿ ವಿಂಡೀಸ್ ಮೊತ್ತವನ್ನು 190ರ ಗಡಿ ದಾಟಿಸುತ್ತಾರೆ.
ಬ್ಯಾಟಿಂಗ್‌ನಲ್ಲೂ ವೈಫಲ್ಯ
ಪ್ರಮುಖ ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿದ ಅಭಿಷೇಕ್ ಶರ್ಮಾ ಅವರು ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದರು. ನಿರ್ಣಾಯಕ ಪಂದ್ಯದಲ್ಲಿ 11 ಎಸೆತಗಳಲ್ಲಿ 10 ರನ್ ಗಳಸಿ ಔಟ್ ಆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.