ADVERTISEMENT

T20 ವಿಶ್ವಕಪ್ ಆರಂಭಕ್ಕೂ ಮೊದಲು ಹೀರೊ, ಈಗ ಆತನೇ ವಿಲನ್: ಅಭಿಷೇಕ್ ಅನಗತ್ಯ ದಾಖಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಫೆಬ್ರುವರಿ 2026, 14:38 IST
Last Updated 18 ಫೆಬ್ರುವರಿ 2026, 14:38 IST
<div class="paragraphs"><p>ನೆದರ್‌ಲ್ಯಾಂಡ್ ವಿರುದ್ಧ ಖಾತೆ ತೆರೆಯದೆ ನಿರ್ಗಮಿಸಿದ ಅಭಿಷೇಕ್ ಶರ್ಮಾ</p></div>

ನೆದರ್‌ಲ್ಯಾಂಡ್ ವಿರುದ್ಧ ಖಾತೆ ತೆರೆಯದೆ ನಿರ್ಗಮಿಸಿದ ಅಭಿಷೇಕ್ ಶರ್ಮಾ

   

ಚಿತ್ರ: @CricCrazyJohns

ADVERTISEMENT

ಅಹಮದಾಬಾದ್: ಇಲ್ಲಿನ ನರೇಂಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾರತ ಹಾಗೂ ನೆದರ್‌ಲ್ಯಾಂಡ್ ತಂಡಗಳ ನಡುವೆ ಸಿ ಗುಂಪಿನ ಕೊನೆಯ ಲೀಗ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ ತಂಡದ ಸ್ಫೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ಟಿ20 ವಿಶ್ವಕಪ್ 2026 ಆರಂಭಕ್ಕೆ ಮೊದಲು ಉತ್ತಮ ಲಯದಲ್ಲಿದ್ದ ಅವರು ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ಆದರೆ, ಟೂರ್ನಿಯುದ್ಧಕ್ಕೂ ನೀರಸ ಪ್ರದರ್ಶನ ನೀಡುವ ಮೂಲಕ ಭಾರತ ತಂಡಕ್ಕೆ ತಲೆನೋವಾಗಿದ್ದಾರೆ.

ಅಭಿಷೇಕ್ ಶರ್ಮಾ ಅವರು, ಟೂರ್ನಿಯಲ್ಲಿ ಲೀಗ್ ಹಂತದ 4 ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಸ್ಫೋಟಕ ಆಟಕ್ಕೆ ಹೆಸರುವಾಸಿಯಾಗಿರುವ ಅವರು, ಆಡಿರುವ ಮೂರು ಪಂದ್ಯಗಳಿಂದ ರನ್ ಖಾತೆಯನ್ನೇ ತೆರೆದಿಲ್ಲ. ಅಮೆರಿಕ ವಿರುದ್ಧ (0), ಪಾಕಿಸ್ತಾನ ವಿರುದ್ಧ (0) ಹಾಗೂ ಇಂದಿನ ಪಂದ್ಯದಲ್ಲಿ ನೆದರ್‌ಲ್ಯಾಂಡ್ ವಿರುದ್ಧವೂ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಅತೀ ಹೆಚ್ಚು ಬಾರಿ ಸತತ ಶೂನ್ಯ ಸುತ್ತಿದ ಆಟಗಾರ

ಹೌದು, ಇಂದಿನ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಅಭಿಷೇಕ್ ಶರ್ಮಾ ಅವರು, ಟಿ20 ವಿಶ್ವಕಪ್‌ನಲ್ಲಿ ಸತತವಾಗಿ ಅತೀ ಹೆಚ್ಚು ಬಾರಿ ಶೂನ್ಯ ಸುತ್ತಿದ ಆರಂಭಿಕ ಬ್ಯಾಟರ್ ಎಂಬ ಅನಗತ್ಯ ದಾಖಲೆಗೆ ಒಳಗಾದರು ಹಾಗೂ ಈ ಅನಗತ್ಯ ದಾಖಲೆ ಮಾಡಿದ ವಿಶ್ವದ 4ನೇ ಆಟಗಾರ ಎನಿಸಿಕೊಂಡರು.

ಟಿ20 ವಿಶ್ವಕಪ್‌ನಲ್ಲಿ ಅತೀ ಹೆಚ್ಚು ಬಾರಿ ಸತತವಾಗಿ ಶೂನ್ಯ ಸುತ್ತಿದ ಆಟಗಾರರು

ಆಶಿಶ್ ನೆಹ್ರಾ– 2010–2016 (ಭಾರತ)

ಅಂಡ್ರೆ ಫ್ಲೆಚರ್ –2009 (ವೆಸ್ಟ್‌ ಇಂಡೀಸ್)

ರೋಜರ್ ಮುಕಾಸ 2024 (ಉಗಾಂಡ)

ಅಭಿಷೇಕ್ ಶರ್ಮಾ–2026 (ಭಾರತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.