ADVERTISEMENT

ಎರಡನೇ ಏಕದಿನ ಪಂದ್ಯ: ಭಾರತದ ವಿರುದ್ಧ ಆಸ್ಟ್ರೇಲಿಯಾಕ್ಕೆ 51 ರನ್‌ ಗೆಲುವು

ಏಜೆನ್ಸೀಸ್
Published 29 ನವೆಂಬರ್ 2020, 13:20 IST
Last Updated 29 ನವೆಂಬರ್ 2020, 13:20 IST
ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ವಿಕೆಟ್‌ ಪಡೆದ ಜೋಶ್ ಹ್ಯಾಜಲ್‌ವುಡ್‌ ಅವರನ್ನು ಸಹ ಆಟಗಾರರು ಅಭಿನಂದಿಸಿದರು.
ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ವಿಕೆಟ್‌ ಪಡೆದ ಜೋಶ್ ಹ್ಯಾಜಲ್‌ವುಡ್‌ ಅವರನ್ನು ಸಹ ಆಟಗಾರರು ಅಭಿನಂದಿಸಿದರು.   

ಸಿಡ್ನಿ: ಭಾರತ ಎದುರಿನ ಎರಡನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ 51 ರನ್‌ಗಳ ಗೆಲುವು ಸಾಧಿಸಿದೆ.

ಇಲ್ಲಿನ ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ(ಎಸ್‌ಸಿಜಿ) ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸೀಸ್‌ ತಂಡ 50 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 389 ರನ್‌ ಗಳಿಸಿತು.

ಸ್ಟೀವ್‌ ಸ್ಮಿತ್‌ 104, ಡೇವಿಡ್‌ ವಾರ್ನರ್‌ 83, ಮಾರ್ನಸ್ ಲಾಬುಶೇನ್ 70, ಮ್ಯಾಕ್ಸ್‌ವೇಲ್‌ 63 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು.

ADVERTISEMENT

390 ರನ್‌ಗಳ ಬೃಹತ್ ಮೊತ್ತ ಬೆನ್ನತ್ತಿದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 338 ರನ್‌ ಗಳಿಸಿ ಸೋಲು ಅನುಭವಿಸಿತು.

ಭಾರತದ ಪರ ವಿರಾಟ್‌ ಕೊಹ್ಲಿ 89, ಕೆ.ಎಲ್‌.ರಾಹುಲ್‌ 76, ಶಿಖರ್ ಧವನ್ 30 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. ಆಸ್ಟ್ರೇಲಿಯಾ ಪರ ಪ್ಯಾಟ್ ಕಮಿನ್ಸ್ 3, ಆ್ಯಡಂ ಜಂಪಾ 2, ಜೋಶ್ ಹ್ಯಾಜಲ್‌ವುಡ್‌ 2 ವಿಕೆಟ್‌ ಪಡೆದರು.

3 ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದ್ದು, ಸರಣಿ ಕೈವಶಪಡಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.