ಕ್ರಿಕೆಟ್
ಬೆಂಗಳೂರು: ಭಾರತ ಮಹಿಳಾ ತಂಡದ ವೇಗದ ಬೌಲರ್ ಅರುಂಧತಿ ರೆಡ್ಡಿ ಅವರು ಇಂಗ್ಲೆಂಡ್ ವಿರುದ್ಧ ಗುರುವಾರ ನಡೆದ ಅಭ್ಯಾಸ ಪಂದ್ಯದ ವೇಳೆ ಆಕಸ್ಮಿಕವಾಗಿ ಗಾಯಾಳಾಗಿದ್ದಾರೆ. ಹೀಗಾಗಿ ಐಸಿಸಿ ಮಹಿಳಾ ಏಕದಿನ ವಿಶ್ವ ಕಪ್ ಸನಿಹದಲ್ಲಿರುವಂತೆ ಭಾರತ ತಂಡಕ್ಕೆ ಹಿನ್ನಡೆಯಾಗಿದೆ.
ಹೀದರ್ ನೈಟ್ ಅವರನ್ನು ತಮ್ಮದೇ ಬೌಲಿಂಗ್‌ನಲ್ಲಿ ರಿಟರ್ನ್ ಕ್ಯಾಚ್ ಪಡೆಯುವ ಯತ್ನದಲ್ಲಿದ್ದಾಗ ಅವರ ಎಡಗಾಲಿನ ತೀವ್ರ ನೋವಿಗೆ ಒಳಗಾದರು. ಮೈದಾನಕ್ಕೆ ಧಾವಿಸಿದ ವೈದ್ಯರು ಅವರಿಗೆ ಎದ್ದೇಳಲು ನೆರವಾದರು. ಆದರೆ ನಂತರ ವೀಲ್‌ಚೇರ್ ಮೂಲಕ ಅವರನ್ನು ಕ್ರೀಡಾಂಗಣದಿಂದ ಕರೆದೊಯ್ಯಲಾಯಿತು.
‘ವಿಶ್ವಕಪ್‌ಗೆ ರೆಡ್ಡಿ ಅವರ ಲಭ್ಯತೆಗೆ ಸಂಬಂಧಿಸಿ ಸ್ಪಷ್ಟತೆಗೆ ಕಾಯಲಾಗುತ್ತಿದೆ’ ಎಂದು ಐಸಿಸಿ ತಿಳಿಸಿದೆ.
ಭಾರತ ಸೆ. 30ರಂದು ಶ್ರೀಲಂಕಾ ವಿರುದ್ಧ ಗುವಾಹಟಿಯಲ್ಲಿ ವಿಶ್ವಕಪ್‌ನ ಉದ್ಘಾಟನಾ ಪಂದ್ಯ ಆಡಲಿದೆ. ಆ ವೇಳೆಗೆ ಅವರು ಚೇತರಿಸಿ ಆಡಲು ಲಭ್ಯರಾಗಬಹುದೆಂಬ ವಿಶ್ವಾಸದಲ್ಲಿ ತಂಡವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.