ADVERTISEMENT

ಸ್ಮಿತ್ ದ್ವಿಶತಕ ಸೊಬಗು

ಪಿಟಿಐ
Published 5 ಸೆಪ್ಟೆಂಬರ್ 2019, 19:45 IST
Last Updated 5 ಸೆಪ್ಟೆಂಬರ್ 2019, 19:45 IST
ಪ್ರೇಕ್ಷಕರೊಬ್ಬರು ಎಸೆದ ಬೀಚ್ ಬಾಲ್ ಅನ್ನು ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಬ್ಯಾಟ್‌ನಿಂದ ಹೊಡೆದು ಬೌಂಡರಿಯಾಚೆ ಕಳಿಸಿದರು –ಎಎಫ್‌ಪಿ ಚಿತ್ರ
ಪ್ರೇಕ್ಷಕರೊಬ್ಬರು ಎಸೆದ ಬೀಚ್ ಬಾಲ್ ಅನ್ನು ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಬ್ಯಾಟ್‌ನಿಂದ ಹೊಡೆದು ಬೌಂಡರಿಯಾಚೆ ಕಳಿಸಿದರು –ಎಎಫ್‌ಪಿ ಚಿತ್ರ   

ಮ್ಯಾಂಚೆಸ್ಟರ್‌ (ಪಿಟಿಐ): ಸ್ಟೀವನ್ ಸ್ಮಿತ್ ಅವರ ರನ್‌ಗಳ ಹಸಿವಿಗೆ ಕಡಿವಾಣ ಹಾಕುವಲ್ಲಿ ಇಂಗ್ಲೆಂಡ್ ಬೌಲರ್‌ಗಳು ಮತ್ತೊಮ್ಮೆ ವಿಫಲರಾದರು.

ಇಲ್ಲಿ ನಡೆಯುತ್ತಿರುವ ಆ್ಯಷಸ್ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ ಅವರು ಗುರುವಾರ ಗಳಿಸಿದ ದ್ವಿಶತಕದ (ಬ್ಯಾಟಿಂಗ್ 205; 314ಎಸೆತ, 23 ಬೌಂಡರಿ, 2ಸಿಕ್ಸರ್) ಬಲದಿಂದ ಆಸ್ಟ್ರೇಲಿಯಾ ತಂಡವು 116 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 415 ರನ್‌ ಗಳಿಸಿತು. ಮೊದಲ ದಿನವಾದ ಬುಧವಾರ ಆಸ್ಟ್ರೇಲಿಯಾ ಆರಂಭದಲ್ಲಿಯೇ ಆಘಾತ ಅನುಭವಿಸಿತ್ತು. ಅರ್ಧಶತಕ ಹೊಡೆದ ಲಾಬುಚೇನ್ ಮತ್ತು ಸ್ಮಿತ್ ತಂಡವನ್ನು ಪಾರು ಮಾಡಿದರು. ಎರಡನೇ ದಿನದಾಟದಲ್ಲಿ ಸ್ಮಿತ್ ಮತ್ತು ನಾಯಕ ಟಿಮ್ ಪೇಮ್ (58; 127 ಎಸೆತ, 8 ಬೌಂಡರಿ) ಅವರ ಜೊತೆಯಾಟವು ರಂಗೇರಿತು.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: 116 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 415 (ಸ್ಟೀವನ್ ಸ್ಮಿತ್ ಬ್ಯಾಟಿಂಗ್ 205, ಟಿಮ್ ಪೇನ್ 58,
ಸ್ಟುವರ್ಟ್ ಬ್ರಾಡ್ 74ಕ್ಕೆ3, ಜ್ಯಾಕ್ ಲೀಚ್ 75ಕ್ಕೆ2, ಕ್ರೇಗ್ ಓವರ್ಟನ್ 80ಕ್ಕೆ2) ವಿವರ ಅಪೂರ್ಣ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.