ADVERTISEMENT

ನಿವೃತ್ತಿಯಾಗುವಂತೆ ಯಾರೂ ಒತ್ತಾಯಿಸಿಲ್ಲ, ಅದು ನನ್ನ ವೈಯಕ್ತಿಕ ನಿರ್ಧಾರ: ಅಶ್ವಿನ್

ಪಿಟಿಐ
Published 9 ಅಕ್ಟೋಬರ್ 2025, 9:20 IST
Last Updated 9 ಅಕ್ಟೋಬರ್ 2025, 9:20 IST
<div class="paragraphs"><p>ರವಿಚಂದ್ರನ್ ಅಶ್ವಿನ್</p></div>

ರವಿಚಂದ್ರನ್ ಅಶ್ವಿನ್

   

ಪಿಟಿಐ ಚಿತ್ರ

ನವದೆಹಲಿ: ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವುದು ನನ್ನ ವೈಯಕ್ತಿಕ ನಿರ್ಧಾರವಾಗಿತ್ತು. ಯಾರೂ ನನ್ನನ್ನು ಒತ್ತಾಯಿಸಿಲ್ಲ ಎಂದು ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸ್ಪಷ್ಟಪಡಿಸಿದರು. ಅಶ್ವಿನ್ ಕಳೆದ ವರ್ಷ ಆಸ್ಟ್ರೇಲಿಯಾ ಟೆಸ್ಟ್ ಪ್ರವಾಸದ ಸಂದರ್ಭದಲ್ಲಿ ಎಲ್ಲಾ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು.

ADVERTISEMENT

39 ವರ್ಷದ ಅವರು, 2024–25ನೇ ಸಾಲಿನ ಬಾರ್ಡರ್–ಗವಾಸ್ಕರ್ ಟ್ರೋಫಿಯ ಸಂದರ್ಭದಲ್ಲಿ ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ಬಳಿಕ ನಿವೃತ್ತಿ ಘೋಷಿಸಿದ್ದರು. ಬಳಿಕ ಅವರು, ಈ ವರ್ಷದ ಆಗಸ್ಟ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದಲೂ ನಿವೃತ್ತಿ ಘೋಷಿಸಿದ್ದರು.

ಈ ಕುರಿತು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿರುವ ಅಶ್ವಿನ್, ‘ನೀನು ನಿವೃತ್ತಿಯಾಗು, ತಂಡದಲ್ಲಿ ನಿನಗೆ ಸ್ಥಾನವಿಲ್ಲ ಅಂತ ಯಾರೂ ನನಗೆ ಹೇಳಿಲ್ಲ. ನಾನು ಈ ನಿರ್ಧಾರ ತೆಗೆದುಕೊಳ್ಳುವ ಮೊದಲು 2-3 ಜನರು ನಿವೃತ್ತಿ ನಿರ್ಧಾರ ಬೇಡ ಎಂದು ಹೇಳಿದ್ದರು. ಆದರೆ ನಾನು ನನ್ನ ನಿರ್ಧಾರ ತೆಗೆದುಕೊಂಡೆ. ಕೆಲವರು ನಾನು ಇನ್ನೂ ಹೆಚ್ಚು ಸಮಯ ಆಡಬೇಕೆಂದು ಬಯಸಿದ್ದರು‘ ಎಂದು ಅಶ್ವಿನ್ ಹೇಳಿದ್ದಾರೆ.

ನಿವೃತ್ತಿ ನಿರ್ಧಾರ ಮಾಡಿದಾಗ, ನಾಯಕ ರೋಹಿತ್ ಶರ್ಮಾ ಯೋಚಿಸಲು ಹೇಳಿದ್ದರು. ಗೌತಮ್ ಗಂಭೀರ್ ಕೂಡ ಮತ್ತೊಮ್ಮೆ ಯೋಚಿಸಲು ಹೇಳಿದ್ದರು. ಆದರೆ, ನಾನು ನನ್ನ ನಿರ್ಧಾರದ ಕುರಿತು ಅಜಿತ್ ಅಗರ್ಕರ್ ಅವರೊಂದಿಗೆ ಚರ್ಚೆ ಮಾಡಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.