ADVERTISEMENT

Asia Cup 2022: ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಆಗಸ್ಟ್ 2022, 10:48 IST
Last Updated 27 ಆಗಸ್ಟ್ 2022, 10:48 IST
   

ದುಬೈ: ಬಹುನಿರೀಕ್ಷಿತ ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ದುಬೈನಲ್ಲಿ ಇಂದಿನಿಂದ ಚಾಲನೆ ದೊರಕಲಿದೆ. ಇಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ತಂಡವು ಅಫ್ಗಾನಿಸ್ತಾನದ ಸವಾಲನ್ನು ಎದುರಿಸಲಿದೆ.

ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿರುವ ಶ್ರೀಲಂಕಾದಲ್ಲಿ ನಡೆಯಬೇಕಾಗಿರುವ ಏಷ್ಯಾ ಕಪ್ ಟೂರ್ನಿಯನ್ನು ಕೊನೆಯ ಕ್ಷಣದಲ್ಲಿ ಮರಳುಗಾಡಿನ ರಾಷ್ಟ್ರಕ್ಕೆ ಸ್ಥಳಾಂತರ ಮಾಡಲಾಗಿತ್ತು.

ಗುಂಪುಗಳ ವಿಂಗಡನೆ:

'ಎ' ಗುಂಪು: ಭಾರತ, ಪಾಕಿಸ್ತಾನ, ಹಾಂಗ್‌ಕಾಂಗ್
'ಬಿ' ಗುಂಪು: ಶ್ರೀಲಂಕಾ, ಅಫ್ಗಾನಿಸ್ತಾನ, ಬಾಂಗ್ಲಾದೇಶ

ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು 'ಸೂಪರ್ 4' ಹಂತಕ್ಕೆ ತೇರ್ಗಡೆ ಹೊಂದಲಿವೆ. ಬಳಿಕ ಸೂಪರ್ 4 ಹಂತದ ಅಗ್ರ ಎರಡು ತಂಡಗಳು ಸೆಪ್ಟೆಂಬರ್ 11ರಂದು ದುಬೈನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ.

ಟೂರ್ನಿಯಲ್ಲಿ ಒಟ್ಟು 13 ಪಂದ್ಯಗಳು ದುಬೈ ಹಾಗೂ ಶಾರ್ಜಾ ಮೈದಾನಗಳಲ್ಲಿನಿಗದಿಯಾಗಿವೆ.

ಇದನ್ನೂ ಓದಿ:

ಏಷ್ಯಾ ಕಪ್ 2022 ವೇಳಾಪಟ್ಟಿ ಇಂತಿದೆ:
ಆ. 27, ಶನಿವಾರ: ಶ್ರೀಲಂಕಾ vs ಅಫ್ಗಾನಿಸ್ತಾನ (ಬಿ ಗುಂಪು), ದುಬೈ
ಆ. 28, ಭಾನುವಾರ: ಭಾರತ vs ಪಾಕಿಸ್ತಾನ (ಎ ಗುಂಪು), ದುಬೈ
ಆ. 30, ಮಂಗಳವಾರ: ಬಾಂಗ್ಲಾದೇಶ vs ಅಫ್ಗಾನಿಸ್ತಾನ (ಬಿ ಗುಂಪು), ಶಾರ್ಜಾ
ಆ. 31, ಬುಧವಾರ: ಭಾರತ vs ಹಾಂಗ್‌ಕಾಂಗ್ (ಎ ಗುಂಪು), ದುಬೈ
ಸೆ. 01, ಗುರುವಾರ: ಶ್ರೀಲಂಕಾ vs ಬಾಂಗ್ಲಾದೇಶ (ಬಿ ಗುಂಪು), ದುಬೈ
ಸೆ. 02, ಶುಕ್ರವಾರ: ಪಾಕಿಸ್ತಾನ vs ಹಾಂಗ್‌ಕಾಂಗ್ (ಎ ಗುಂಪು), ಶಾರ್ಜಾ

ಸೂಪರ್ 4 ಹಂತ:
ಸೆ. 03, ಶನಿವಾರ: ಬಿ1 vs ಬಿ2 , ಶಾರ್ಜಾ
ಸೆ. 04, ಭಾನುವಾರ: ಎ1 vs ಎ2 , ದುಬೈ
ಸೆ. 06, ಮಂಗಳವಾರ: ಎ1 vs ಬಿ1 , ದುಬೈ
ಸೆ. 07, ಬುಧವಾರ: ಎ2 vs ಬಿ2 , ದುಬೈ
ಸೆ. 08, ಗುರುವಾರ: ಎ1 vs ಬಿ2 , ದುಬೈ
ಸೆ. 09, ಶುಕ್ರವಾರ: ಬಿ1 vs ಎ2 , ದುಬೈ

ಫೈನಲ್:
ಸೆ. 11, ಭಾನುವಾರ: ಫೈನಲ್, ದುಬೈ

*ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಸರಿಯಾಗಿ ಆರಂಭವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.