
ಬಾಂಗ್ಲಾದೇಶ ಆಟಗಾರರು
ದುಬೈ: ಸುಲಭದ ಕ್ಯಾಚ್‌ಗಳನ್ನು ಕೈಚಿಲ್ಲಿರುವುದು ಮತ್ತು ಕೆಲವು ಕೆಟ್ಟ ಹೊಡೆತಕ್ಕೆ ಕೈ ಹಾಕಿದ್ದು ಪಾಕಿಸ್ತಾನ ವಿರುದ್ಧದ ಸೋಲಿಗೆ ಕಾರಣ ಎಂದು ಬಾಂಗ್ಲಾದೇಶ ತಂಡದ ಮುಖ್ಯ ತರಬೇತುದಾರ ಫಿಲ್ ಸಿಮನ್ಸ್ ತಿಳಿಸಿದರು.
ಒಂದು ಹಂತದಲ್ಲಿ ಪಾಕಿಸ್ತಾನ ತಂಡ ಕೇವಲ 51 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಅದಾದ ಬಳಿಕ ಬಾಂಗ್ಲಾ ಆಟಗಾರರು ಶಾಹೀನ್ ಶಾ ಅಫ್ರಿದಿ ಮತ್ತು ಮೊಹಮ್ಮದ್ ನವಾಜ್ ಅವರು ನೀಡಿದ ಸುಲಭದ ಕ್ಯಾಚ್‌ಗಳನ್ನು ಕೈಚೆಲ್ಲಿದರು.
ಬಾಂಗ್ಲಾ ಆಟಗಾರರು ನೀಡಿದ ಈ ಅವಕಾಶ ಬಳಸಿಕೊಂಡ ಈ ಇಬ್ಬರು ಪಾಕಿಸ್ತಾನ ಬ್ಯಾಟರ್‌ಗಳು ಉತ್ತಮ ರನ್ ಕಲೆಹಾಕಿದರು. ಶಾಹೀನ್ ಶಾ ಅಫ್ರಿದಿ 2 ಸಿಕ್ಸರ್ ಸಹಿತ 13 ಎಸೆತಗಳಲ್ಲಿ 19 ರನ್ ಗಳಿಸಿದರೆ, ನವಾಜ್ ಕೇವಲ 15 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನಿಂದ 25 ರನ್ ಸಿಡಿಸಿ ತಂಡದ ಮೊತ್ತ 135 ಆಗುವಂತೆ ನೋಡಿಕೊಂಡರು.
ಈ ಕುರಿತು ಮಾತನಾಡಿದ ಬಾಂಗ್ಲಾ ಕೋಚ್ ಫಿಲ್ ಸಿಮನ್ಸ್, ‘ಕ್ಯಾಚ್‌ಗಳನ್ನು ಕೈಚೆಲ್ಲುವುದಕ್ಕೆ ಮೊದಲು ಪಂದ್ಯ ನಮ್ಮ ನಿಯಂತ್ರಣದಲ್ಲಿತ್ತು. ನಾವು ಕ್ಯಾಚ್ ಕೈಬಿಟ್ಟಿದ್ದು ದುಬಾರಿಯಾಯಿತು‘ ಎಂದರು.
ಮಾತ್ರವಲ್ಲ, 135 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟುವಾಗ ನಮ್ಮ ಬ್ಯಾಟರ್‌ಗಳು ತಾಳ್ಮೆಯ ಆಟ ಪ್ರದರ್ಶಿಸಬಹುದಿತ್ತು. ಆದರೆ ಬ್ಯಾಟರ್‌ಗಳು ಕೆಲವು ಕೆಟ್ಟ ಶಾಟ್‌ಗಳಿಗೆ ಮುಂದಾಗಿ ವಿಕೆಟ್ ಒಪ್ಪಿಸಿದ್ದು ಸೋಲಿಗೆ ಕಾರಣವಾಯಿತು‘ ಎಂದು ಪಂದ್ಯದ ಸೋಲಿಗೆ ಬ್ಯಾಟರ್‌ಗಳು ಹಾಗೂ ಕಳಪೆ ಕ್ಷೇತ್ರ ರಕ್ಷಣೆ ಕಾರಣ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.