ADVERTISEMENT

ಕ್ರಿಕೆಟ್‌ನತ್ತ ಮಾತ್ರ ಗಮನಹರಿಸಿ: ಫೈನಲ್‌ಗೂ ಮುನ್ನ ಪಾಕ್ ಆಟಗಾರರಿಗೆ ಕೋಚ್ ಸಲಹೆ

ಪಿಟಿಐ
Published 26 ಸೆಪ್ಟೆಂಬರ್ 2025, 5:24 IST
Last Updated 26 ಸೆಪ್ಟೆಂಬರ್ 2025, 5:24 IST
<div class="paragraphs"><p>ಪಾಕಿಸ್ತಾನ ತಂಡದ ಆಟಗಾರರು</p></div>

ಪಾಕಿಸ್ತಾನ ತಂಡದ ಆಟಗಾರರು

   

–ಪಿಟಿಐ ಚಿತ್ರ

ದುಬೈ: ಏಷ್ಯಾ ಕಪ್ ಸೂಪರ್–4 ಹಂತದ ಗೆಲ್ಲಲೇಬೇಕಾದ ಒತ್ತಡದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಬಾಂಗ್ಲಾದೇಶವನ್ನು 11 ರನ್‌ಗಳ ರೋಚಕ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಫೈನಲ್‌ನಲ್ಲಿ ಟೀಂ ಇಂಡಿಯಾವನ್ನು ಎದುರಿಸಲಿದ್ದು, ಅದಕ್ಕೂ ಮೊದಲು ಪಾಕಿಸ್ತಾನದ ಮುಖ್ಯ ಕೋಚ್ ತನ್ನ ಆಟಗಾರರಿಗೆ ಸಲಹೆ ನೀಡಿದ್ದಾರೆ.

ADVERTISEMENT

ಈ ಬಾರಿಯ ಏಷ್ಯಾ ಕಪ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಇದುವರೆಗೂ ಆಡಿದ ಎರಡೂ ಪಂದ್ಯಗಳಲ್ಲಿ ಪಾಕಿಸ್ತಾನ ಸೋಲನುಭವಿಸಿದೆ. ಇದೀಗ ಇದೇ ಟೂರ್ನಿಯಲ್ಲಿ ಮತ್ತೊಮ್ಮೆ ಫೈನಲ್‌ನಲ್ಲಿ ಕೂಡ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಮೊದಲೆರಡು ಪಂದ್ಯಗಳ ಸಂದರ್ಭದಲ್ಲಿ ಉಭಯ ಆಟಗಾರರ ನಡುವೆ ಉಂಟಾದ ಉದ್ವಿಗ್ನತೆ, ಮೈದಾನದಲ್ಲಿನ ಸಂಘರ್ಷ ಫೈನಲ್ ಪಂದ್ಯದ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಬಾಂಗ್ಲಾದೇಶ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಮೈಕ್ ಹೆಸ್ಸನ್, ‘ನಮ್ಮ ಆಟಗಾರರಿಗೆ ನನ್ನ ಸಂದೇಶವೆಂದರೆ ಕೇವಲ ಕ್ರಿಕೆಟ್‌ನತ್ತ ಮಾತ್ರ ಗಮನ ಹರಿಸುವುದು. ನಮ್ಮ ಆಟಗಾರರು ಖಂಡಿತ ಅದನ್ನು ಮಾಡುತ್ತಾರೆ. ರೋಚಕ ಪಂದ್ಯಗಳಿದ್ದಾಗ ಸನ್ನೆಗಳು ಬರುವುದು ಸಹಜ. ಅದು ಆಟಗಾರರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತದೆ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.