ADVERTISEMENT

Asia Cup 2025: ಪಾಕ್‌ ರಾಷ್ಟ್ರಗೀತೆ ಬದಲು ಡಿಜೆ ಹಾಡು ಹಾಕಿದ ಆಯೋಜಕರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಸೆಪ್ಟೆಂಬರ್ 2025, 15:53 IST
Last Updated 14 ಸೆಪ್ಟೆಂಬರ್ 2025, 15:53 IST
<div class="paragraphs"><p>ಪಾಕ್‌ ಆಟಗಾರರು</p></div>

ಪಾಕ್‌ ಆಟಗಾರರು

   

ದುಬೈ: ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ–ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿವೆ. ಟಾಸ್‌ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್‌ ಮಾಡಿದೆ.

ಪಂದ್ಯ ಆರಂಭಕ್ಕೂ ಮುನ್ನ ಕ್ರೀಡಾಂಗಣದಲ್ಲಿ ರಾಷ್ಟ್ರಗೀತೆ ಹಾಕುವುದು ಪದ್ಧತಿ. ಆದರೆ ದುಬೈ ಕ್ರೀಡಾಂಗಣದಲ್ಲಿ ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಬದಲು ಡಿಜೆ ಹಾಡು ಪ್ಲೇ ಆಗಿದ್ದು ನೆರೆದಿದ್ದವರನ್ನು, ಆಟಗಾರರನ್ನು ಕೆಲ ಕ್ಷಣ ಗೊಂದಲಕ್ಕೀಡು ಮಾಡಿತು. ತಪ್ಪನ್ನು ತಕ್ಷಣ ಸರಿಪಡಿಸಿಕೊಂಡ ಆಯೋಜಕರು ಪಾಕಿಸ್ತಾನದ ರಾಷ್ಟ್ರಗೀತೆ ಹಾಕಿದ್ದಾರೆ.

ADVERTISEMENT

ತಪ್ಪಾಗಿ ಹಾಡು ಹಾಕಿರುವುದನ್ನು ಕೆಲವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಟ್ರೋಲ್‌ ಮಾಡುತ್ತಿದ್ದಾರೆ. ‘ಪಾಕಿಸ್ತಾನ ರಾಷ್ಟ್ರಗೀತೆ ಬದಲು ‘ಜಲೇಬಿ ಬೇಬಿ’ ಹಾಡನ್ನು ಹಾಕಿದ್ದಾರೆ. ಇದು ಅವರ ರಾಷ್ಟ್ರಗೀತೆ’ ಎಂದು ಕೆಲವರು ಅಪಹಾಸ್ಯ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.