ADVERTISEMENT

ವಿಶ್ವಕಪ್ ಆಡದಿರುವ ನಿರ್ಧಾರ ಬಿಸಿಬಿ, ಆಟಗಾರರದ್ದು: ಆಸಿಫ್‌ ನಝ್ರುಲ್

ಪಿಟಿಐ
Published 11 ಫೆಬ್ರುವರಿ 2026, 13:48 IST
Last Updated 11 ಫೆಬ್ರುವರಿ 2026, 13:48 IST
<div class="paragraphs"><p>ಖವಾಜಾ ಆಸಿಫ್‌</p></div>

ಖವಾಜಾ ಆಸಿಫ್‌

   

ಢಾಕಾ: ಭದ್ರತೆಯ ಕಳವಳ ಇರುವುದರಿಂದ ಭಾರತದಲ್ಲಿ ಟಿ20ವಿಶ್ವಕಪ್ ಪಂದ್ಯಗಳನ್ನು ಆಡಲು ತಮ್ಮ ಸರ್ಕಾರ ನಿರಾಕರಿಸಿದ್ದಾಗಿ ಹೇಳಿದ್ದ ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಆಸಿಫ್‌ ನಝ್ರುಲ್ ಈಗ ಉಲ್ಟಾ ಹೊಡೆದಿದ್ದಾರೆ. ‘ದೇಶದ ಘನತೆಯನ್ನು ಸಂರಕ್ಷಿಸುವ ಉದ್ದೇಶದಿಂದ ಬಾಂಗ್ಲಾ ಕ್ರಿಕೆಟ್ ಮಂಡಳಿ ಮತ್ತು ಆಟಗಾರರೇ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.

ವಿಶ್ವಕಪ್‌ನಲ್ಲಿ ಭಾರತದಲ್ಲಿ ಆಡಬೇಕಾದ ತಮ್ಮ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಮಾಡಿದ ಮನವಿಗೆ ಐಸಿಸಿ ಒಪ್ಪಿರಲಿಲ್ಲ. ಹೀಗಾಗಿ ಬಾಂಗ್ಲಾದೇಶ ತಂಡದ ಬದಲು ಕೊನೆಗಳಿಗೆಯಲ್ಲಿ ಸ್ಕಾಟ್ಲೆಂಡ್ ತಂಡವನ್ನು ಸೇರ್ಪಡೆಗೊಳಿಸಲಾಗಿತ್ತು. 

ADVERTISEMENT

ತಂಡ ಹೊರಬೀಳುವ ಮುನ್ನ ಐಸಿಸಿ ಜೊತೆ ನಡೆದ ಮಾತುಕತೆಯಲ್ಲಿ ನಝ್ರುಲ್ ಕೇಂದ್ರಬಿಂದುವಾಗಿದ್ದರು. 

‘ನಮಗೆ (ವಿಶ್ವಕಪ್‌ನಲ್ಲಿ ಆಡಲು ಆಗದಿರುವುದಕ್ಕಾಗಿ) ಯಾವುದೇ ವಿಷಾದದ ಪ್ರಶ್ನೆಯಿಲ್ಲ. ದೇಶದ ಕ್ರಿಕೆಟ್‌ ಹಿತದೃಷ್ಟಿಯಿಂದ, ಜನರ ಸುರಕ್ಷತೆ ಮತ್ತು ದೇಶದ ಘನತೆಯನ್ನು ರಕ್ಷಿಸುವ ಉದ್ದೇಶದಿಂದ ಈ ನಿರ್ಧಾರವನ್ನು ಬಿಸಿಸಿ ಮತ್ತು ಆಟಗಾರರು ತೆಗೆದುಕೊಂಡಿದ್ದರು’ ಎಂದು ಆಸಿಫ್ ಮಂಗಳವಾರ ಹೇಳಿರುವುದನ್ನು ‘ಕ್ರಿಕ್‌ ಬಝ್‌’ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.