ADVERTISEMENT

ಆ್ಯಷಸ್‌ ಸರಣಿಯ 4ನೇ ಟೆಸ್ಟ್‌: ವೇಗದ ದಾಳಿ ನೆಚ್ಚಿಕೊಂಡ ಆಸ್ಟ್ರೇಲಿಯಾ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 23:30 IST
Last Updated 25 ಡಿಸೆಂಬರ್ 2025, 23:30 IST
<div class="paragraphs"><p>ಆ್ಯಷಸ್ ಟ್ರೋಫಿ ಜೊತೆಗೆ ಆಸ್ಟ್ರೇಲಿಯಾ ನಾಯಕ ಸ್ವೀವನ್ ಸ್ಮಿತ್ ಹಾಗೂ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್</p></div>

ಆ್ಯಷಸ್ ಟ್ರೋಫಿ ಜೊತೆಗೆ ಆಸ್ಟ್ರೇಲಿಯಾ ನಾಯಕ ಸ್ವೀವನ್ ಸ್ಮಿತ್ ಹಾಗೂ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್

   

ಚಿತ್ರ :@Akaran_1

ಮೆಲ್ಬರ್ನ್: ಆಸ್ಟ್ರೇಲಿಯಾ ತಂಡವು ಪೂರ್ಣವಾಗಿ ವೇಗದ ದಾಳಿಯನ್ನು ನೆಚ್ಚಿಕೊಂಡು, ಆ್ಯಷಸ್‌ ಸರಣಿಯ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿಯಲಿದೆ ಎಂದು ನಾಯಕ ಸ್ಟೀವ್‌ ಸ್ಮಿತ್ ಗುರುವಾರ ತಿಳಿಸಿದ್ದಾರೆ. ಈ ‘ಬಾಕ್ಸಿಂಗ್ ಡೇ’ ಟೆಸ್ಟ್ ಪಂದ್ಯ ಶುಕ್ರವಾರ ಆರಂಭವಾಗಲಿದೆ.

ADVERTISEMENT

ಆಯ್ಕೆಗಾರರು ಉಸ್ಮಾನ್‌ ಖ್ವಾಜಾ ಅವರ ಮೇಲೆ ಭರವಸೆಯಿಟ್ಟುಕೊಂಡು, ಜೋಶ್‌ ಇಂಗ್ಲಿಸ್‌ ಅವರನ್ನು ಕೈಬಿಟ್ಟಿದ್ದಾರೆ. ಆಸ್ಟ್ರೇಲಿಯಾ ಐದು ಪಂದ್ಯಗಳ ಸರಣಿಯಲ್ಲಿ 3–0 ಮುನ್ನಡೆ ಪಡೆದಿದೆ. ಆದರೆ ಶುಕ್ರವಾರ ಆರಂಭವಾಗುವ ಟೆಸ್ಟ್‌ನಲ್ಲಿ ಹಿರಿಯ ವೇಗಿ ಹಾಗೂ ನಾಯಕ ಪ್ಯಾಟ್‌ ಕಮಿನ್ಸ್ ಮತ್ತು ಅನುಭವಿ ಸ್ಪಿನ್ನರ್ ನೇಥನ್ ಲಯನ್ ಅವರಿಲ್ಲದೇ ಕಣಕ್ಕಿಳಿಯುತ್ತಿದೆ.

ಮಂಡಿರಜ್ಜು ನೋವಿನಿಂದ ಬಳಲುತ್ತಿರುವ ಲಯನ್, ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

ಆಸ್ಟ್ರೇಲಿಯಾದ 12 ಮಂದಿಯ ತಂಡ: ಟ್ರಾವಿಸ್‌ ಹೆಡ್‌, ಜೇಕ್ ವೆದರ್‌ಫೀಲ್ಡ್‌, ಮಾರ್ನಸ್‌ ಲಾಬುಷೇನ್‌, ಸ್ಟೀವ್‌ ಸ್ಮಿತ್ (ನಾಯಕ), ಉಸ್ಮಾನ್ ಖ್ವಾಜಾ, ಅಲೆಕ್ಸ್‌ ಕ್ಯಾರಿ, ಕ್ಯಾಮೆರಾನ್ ಗ್ರೀನ್‌, ಮಿಚೆಲ್‌ ಸ್ಟಾರ್ಕ್, ಸ್ಕಾಟ್‌ ಬೋಲ್ಯಾಂಡ್‌, ಬ್ರೆಂಡನ್ ಡಾಜೆಟ್‌, ಮೈಕೆಲ್ ನೆಸೆರ್‌, ಜ್ಯೇ ರಿಚರ್ಡ್‌ಸನ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.