ADVERTISEMENT

ಇಂಗ್ಲೆಂಡ್‌ಗೆ ತಂಡ ಕಳುಹಿಸದ ಬಿಸಿಸಿಐ ಯುಎಇಯಲ್ಲಿ ಐಪಿಎಲ್ ಆಯೋಜಿಸುತ್ತದೆ: ಹೀಲಿ

ಪಿಟಿಐ
Published 24 ಜುಲೈ 2020, 15:49 IST
Last Updated 24 ಜುಲೈ 2020, 15:49 IST
ಅಲೈಸಾ ಹೀಲಿ
ಅಲೈಸಾ ಹೀಲಿ   

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡವು ಇಂಗ್ಲೆಂಡ್‌ ಪ್ರವಾಸವನ್ನು ರದ್ದು ಮಾಡಿರುವ ನಿರ್ಧಾರದ ಕುರಿತು ಆಸ್ಟ್ರೇಲಿಯಾದ ಆಟಗಾರ್ತಿ ಅಲೈಸಾ ಹೀಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತ ಮಹಿಳಾ ತಂಡವು ಹೋದ ಜೂನ್‌ನಲ್ಲಿ ಇಂಗ್ಲೆಂಡ್‌ಗೆ ತೆರಳಬೇಕಿತ್ತು. ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಬೇಕಿತ್ತು.

ಆದರೆ ಕೊರೊನಾ ವೈರಸ್‌ ಪ್ರಸರಣದ ಕಾರಣಕ್ಕೆ ಟೂರ್ನಿಯನ್ನು ಮುಂದೂಡಲಾಗಿತ್ತು. ಆದರೆ ಪ್ರವಾಸವನ್ನು ಕೈಬಿಟ್ಟಿರುವುದಾಗಿ ಬಿಸಿಸಿಐ ಈಚೆಗೆ ಪ್ರಕಟಿಸಿತ್ತು.

ADVERTISEMENT

ಈ ಕುರಿತು ಪ್ರತಿ್ಕ್ರಿಯಿಸಿರುವ ಹೀಲಿ, ’ಮುಂದಿನ ವರ್ಷ ವಿಶ್ಕಕಪ್ ಟೂರ್ನಿ ಇದೆ. ಅದರ ಹಿನ್ನೆಲೆಯಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳಿಗೆ ಈ ಸರಣಿಗಳು ಮುಖ್ಯವಾಗಿದ್ದವು. ಆದರೆ ಭಾರತ ತಂಡವನ್ನು ಕಳಿಸಲು ಬಿಸಿಸಿಐ ಏಕೆ ಹಿಂಜರಿಯಿತು. ಅದೇ ಯುಎಇಯಲ್ಲಿ ಐಪಿಎಲ್ ಟೂರ್ನಿ ನಡೆಸಲು ಮುಂದಾಗಿರುವುದು ವಿಚಿತ್ರ‘ ಎಂದು ಅಲ್ಲಿಯ ಕ್ರಿಕೆಟ್ ವಿಶ್ಲೇಷಕ ರಿಕ್ ಐರ್‌ ಮಾಡಿರುವ ಟ್ವೀಟ್‌ಗೆ ಹೀಲಿ ಪ್ರತಿಕ್ರಿಯಿಸಿದ್ದಾರೆ.

ಮುಂದಿನ ವರ್ಷದ ಫೆಬ್ರುವರಿ 6ರಿಂದ ಮಾರ್ 7ರವರೆಗೆ ನ್ಯೂಜಿಲೆಂಡ್‌ನಲ್ಲಿ ಮಹಿಳೆಯರ ವಿಶ್ವಕಪ್ ಟೂರ್ನಿ ನಡೆಯಲಿದೆ.

ಹೋದ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾದ ಆತಿಥ್ಯದಲ್ಲಿ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿ ನಡೆದಿತ್ತು. ಅದರ ನಂತರ ಮಹಿಳಾ ಕ್ರಿಕೆಟ್‌ನ ಯಾವುದೇ ಚಟುವಟಿಕೆಗಳು ನಡೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.