ADVERTISEMENT

‘ಬಿಸಿಸಿಐ ಅಧ್ಯಕ್ಷ ಗಂಗೂಲಿ ಅವರಲ್ಲಿ ಐಸಿಸಿಯನ್ನು ಮುನ್ನಡೆಸುವ ರಾಜಕೀಯ ಕೌಶಲವಿದೆ’

ಏಜೆನ್ಸೀಸ್
Published 15 ಮೇ 2020, 12:07 IST
Last Updated 15 ಮೇ 2020, 12:07 IST
   

ನವದೆಹಲಿ: ಸದ್ಯ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿರುವ ಸೌರವ್‌ ಗಂಗೂಲಿ ಅವರು ಮುಂದೊಂದು ದಿನ ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯನ್ನು (ಐಸಿಸಿ) ಮುನ್ನಡೆಸಲು ಬೇಕಾದಷ್ಟು ಉತ್ತಮ ‘ರಾಜಕೀಯ ಕೌಶಲ’ಹೊಂದಿದ್ದಾರೆ. ಬಿಸಿಸಿಐಯನ್ನು ಮುನ್ನಡೆಸುವಅತ್ಯಂತ ಕಠಿಣ ಕೆಲಸ ಮಾಡುವ ಮೂಲಕ ಅದನ್ನು ಸಾಬೀತು ಮಾಡಿದ್ದಾರೆ ಎಂದು ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಡೇವಿಡ್‌ ಗೋವೆರ್‌ ಹೇಳಿದ್ದಾರೆ.

ಎಡಗೈ ಬ್ಯಾಟ್ಸ್‌ಮನ್‌ ಗಂಗೂಲಿ ಅವರ ನಾಯಕತ್ವದ ಸಾಮರ್ಥ್ಯದಿಂದ ಪ್ರಭಾವಿತನಾಗಿರುವುದಾಗಿ ಹೇಳಿರುವ ಗೋವೆರ್‌, ‘ಭವಿಷ್ಯದಲ್ಲಿ ಐಸಿಸಿಯನ್ನು ಮುನ್ನಡೆಸಲು ಬೇಕಾದ ಸಾಮರ್ಥ್ಯವನ್ನು ಅವರು ಗಳಿಸಿಕೊಳ್ಳಲಿದ್ದಾರೆ’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಟ್ವಿಟರ್‌ನಲ್ಲಿ ಅಭಿಮಾನಿಗಳೊಟ್ಟಿಗೆ ನಡೆಸಿದ GloFans ಸಂವಾದದವೇಳೆ, ‘ನಾನು ಹಲವು ವರ್ಷಗಳ ಅನುಭವದಲ್ಲಿ ಕಲಿತ ವಿಷಯವೆಂದರೆ, ನೀವು ಬಿಸಿಸಿಐ ಅನ್ನು ಮುನ್ನಡೆಸಲು ಹೋಗುವುದಾದರೆ, ಹಲವು ವಿಚಾರಗಳನ್ನು ತಿಳಿದಿರಬೇಕು. ಆ ನಿಟ್ಟಿನಲ್ಲಿ ಗಂಗೂಲಿಯಂತಹ ಖ್ಯಾತಿ ಹೊಂದುವುದು ಉತ್ತಮ ಆರಂಭ. ಆದರ ಹೊರತಾಗಿಯೂಚತುರ ರಾಜಕಾರಣಿಯಾಗಿರಲೇಬೇಕು. ನೀವು ಲಕ್ಷಾಂತರ ವಿಭಿನ್ನ ವಿಷಯಗಳ ಮೇಲೆ ನಿಯಂತ್ರಣ ಹೊಂದಿರಬೇಕು’ ಎಂದು ಗೋವರ್ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಬಿಸಿಸಿಐ ಅಧ್ಯಕ್ಷರಾಗಿರುವುದು ವಿಶ್ವ ಕ್ರಿಕೆಟ್‌ನ ಅತ್ಯಂತ ಕಷ್ಟದ ಕೆಲಸ. ‘ಖಂಡಿಯವಾಗಿಯೂ ನೀವು ಅನುಸರಿಸಬೇಕಾದ ತಂತ್ರಗಳಿಗೆ ಜವಾಬ್ದಾರರಾಗಿರಬೇಕಾಗುತ್ತದೆ. ಅಂದರೆ, ಶತಕೋಟಿ ಜನರಿರುವ ಭಾರತದಲ್ಲಿ ನೀವು ಎಲ್ಲವನ್ನೂ ಹೇಳಬೇಕಾಗುತ್ತದೆ’ ಎಂದು ತಿಳಿಸಿದ್ದಾರೆ. ಮುಂದುವರಿದು, ‘ಆತ ತುಂಬಾ ಒಳ್ಳೆಯ ವ್ಯಕ್ತಿ ಮತ್ತು ರಾಜಕೀಯ ಕೌಶಲಗಳನ್ನು ಹೊಂದಿದ್ದಾರೆ. ಸರಿಯಾದ ಮನೋಭಾವ ಹೊಂದಿದ್ದಾರೆ. ಹಲವು ವಿಚಾರಗಳನ್ನು ಒಟ್ಟಿಗೇ ಇಟ್ಟುಕೊಂಟು ಉತ್ತಮ ಕೆಲಸ ಮಾಡುತ್ತಾರೆ’ ಎಂದು ಗೋವೆರ್ ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.