ಬೆಂಗಳೂರು: ಈ ಬಾರಿಯ ಐಪಿಎಲ್ ಪಂದ್ಯಗಳು ನಡೆದ 10 ಕ್ರೀಡಾಂಣಗಳ ಮೈದಾನ ಸಿಬ್ಬಂದಿ ಹಾಗೂ ಪಿಚ್ ಕ್ಯುರೇಟರ್‌ಗಳಿಗೆ ಬಿಸಿಸಿಐ ತಲಾ ₹25 ಲಕ್ಷ ಬಹುಮಾನ ಘೋಷಿಸಿದೆ.
ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಎಕ್ಸ್ ಮೂಲಕ ಮಾಹಿತಿ ನೀಡಿದ್ದಾರೆ. ಮೈದಾನ ಸಿಬ್ಬಂದಿಯನ್ನು ಅಸಾಧಾರಣ ಹೀರೋಗಳು ಎಂದು ಅವರು ಬಣ್ಣಸಿದ್ದಾರೆ.
‘ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿಯೂ ಅದ್ಭುತವಾದ ಪಿಚ್‌ಗಳನ್ನು ಒದಗಿಸಲು ಮೈದಾನ ಸಿಬ್ಬಂದಿ ದಣಿವರಿಯದೆ ಕೆಲಸ ಮಾಡಿದ್ದಾರೆ. ಮೆಚ್ಚುಗೆಯ ಸಂಕೇತವಾಗಿ ಐಪಿಎಲ್ ಪಂದ್ಯಗಳು ನಡೆದ 10 ಕ್ರೀಡಾಂಗಣದ ಮೈದಾನ ಸಿಬ್ಬಂದಿಗಳು ಹಾಗೂ ಕ್ಯುರೇಟರ್‌ಗಳಿಗೆ ತಲಾ ₹ 25 ಲಕ್ಷ ಬಹುಮಾನ ನೀಡಲಾಗುತ್ತದೆ. 3 ಹೆಚ್ಚುವರಿ ಕ್ರೀಡಾಂಗಣದ ಸಿಬ್ಬಂದಿಗೆ ₹10 ಲಕ್ಷ ನೀಡಲಾಗುತ್ತದೆ’ ಎಂದು ಬರೆದುಕೊಂಡಿದ್ದಾರೆ,
‘ನಿಮ್ಮ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ಧನ್ಯವಾದಗಳು’ ಎಂದು ಅವರು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.