ADVERTISEMENT

ಬಿಸಿಸಿಐ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ ಮಾನ್ಯತೆ ಪಡೆದಿಲ್ಲ: ಮಾಂಡವೀಯ

ಪಿಟಿಐ
Published 15 ಡಿಸೆಂಬರ್ 2025, 13:53 IST
Last Updated 15 ಡಿಸೆಂಬರ್ 2025, 13:53 IST
ಬಿಸಿಸಿಐ
ಬಿಸಿಸಿಐ   

ನವದೆಹಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ (ಎನ್‌ಎಸ್‌ಎಫ್‌) ಮಾನ್ಯತೆ ಪಡೆದಿಲ್ಲ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಸೋಮವಾರ ಲೋಕಸಭೆಗೆ ತಿಳಿಸಿದ್ದಾರೆ.

ಕೋಲ್ಕತ್ತ ದಕ್ಷಿಣ ಕ್ಷೇತ್ರದ ತೃಣಮೂಲ ಕಾಂಗ್ರೆಸ್‌ ಸದಸ್ಯೆ ಮಾಲಾ ರಾಯ್ ಅವರ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದ್ದಾರೆ.

ಮಂಡಳಿಯು ದೀರ್ಘಕಾಲದಿಂದ ಎನ್‌ಎಸ್‌ಎಫ್‌ ಮಾನ್ಯತೆ ಪಡೆದಿಲ್ಲ. ಆದರೆ ಮುಂದಿನ ವರ್ಷ ನೂತನ ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ ಜಾರಿಯಾದ ನಂತರ ಇದು ಬದಲಾಗುವ ನಿರೀಕ್ಷೆಯಿದೆ.

ADVERTISEMENT

ಬಿಸಿಸಿಐ ಮತ್ತು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್ (ಎಐಎಫ್‌ಎಫ್‌)ನಂಥ ದೊಡ್ಡ ಸಂಸ್ಥೆಗಳ ಸುಗಮ ಕಾರ್ಯನಿರ್ವಹಣೆಗಾಗಿ ಸರ್ಕಾರ ಅವುಗಳನ್ನು ನಿಯಂತ್ರಣಕ್ಕೆ ಪಡೆಯುವ ಉದ್ದೇಶ ಹೊಂದಿದೆಯೇ ಎಂಬ ಸಂಸದೆ ಕೇಳಿದ್ದರು.

 ಅಂಗೀಕಾರ ಪಡೆದ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಗೆ ಆಗಸ್ಟ್‌ನಲ್ಲಿ ಸಂಸತ್ತು ಅಂಗೀಕಾರ ನೀಡಿತ್ತು. ಇದರ ನಿಯಮಗಳ ಜಾರಿಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು. ಮುಂದಿನ ವರ್ಷದಿಂದ ಕಾಯ್ದೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲಾಗುವುದು ಎಂದು ಮಾಂಡವೀಯ ಭರವಸೆ ನೀಡಿದರು.

ಸರ್ಕಾರದ ಅನುದಾನದ ಮೇಲೆ ಅವಲಂಬನೆ ಹೊಂದಿಲ್ಲದ ಕಾರಣ ಬಿಸಿಸಿಐಯನ್ನು ಎನ್‌ಎಸ್‌ಎಫ್‌ ಎಂದು ಘೋಷಿಸಿರಲಿಲ್ಲ. ಆದರೆ ನೂತನ ಕಾಯ್ದೆ ಜಾರಿಗೆ ಬಂದ ಮೇಲೆ ಇದು ಕೂಡ ಎನ್‌ಎಸ್‌ಎಫ್‌ ಎಂದು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಕ್ರಿಕೆಟ್‌ ಸಹ ಒಲಿಂಪಿಕ್ ಕ್ರೀಡೆಯಾಗಲಿರುವುದು ಇದಕ್ಕೆ ಕಾರಣ. 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ ಕ್ರೀಡೆಗಳಲ್ಲಿ ಟಿ20 ಮಾದರಿಯ ಕ್ರಿಕೆಟ್‌ ಸೇರ್ಪಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.