ಮರಳುಗಾಡಿನ ಅಂಗಳದಲ್ಲಿ ಭಾನುವಾರ ರಾತ್ರಿ ತ್ರಿವರ್ಣ ಧ್ವಜದ ಸಂಭ್ರಮ ಗಗನಮುಖಿಯಾಯಿತು. ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡಕ್ಕೆ 12 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ ಒಲಿಯಿತು.
ಪಿಟಿಐ ಚಿತ್ರ
ಇತಿಹಾಸದಲ್ಲಿ ಭಾರತವು 3ನೇ ಬಾರಿ ಪ್ರಶಸ್ತಿ ಗೆದ್ದಿತು. 2002ರಲ್ಲಿ ಶ್ರೀಲಂಕಾದೊಂದಿಗೆ ಜಂಟಿಯಾಗಿ ಪ್ರಶಸ್ತಿ ಹಂಚಿಕೊಂಡಿತ್ತು. 2013ರಲ್ಲಿ ಮಹೇಂದ್ರಸಿಂಗ್ ಧೋನಿ ಬಳಗವು ಪ್ರಶಸ್ತಿ ಗೆದ್ದಿತ್ತು.
ರೋಚಕ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿದ ಭಾರತ ‘ಚಾಂಪಿಯನ್’ ಆಯಿತು.
ಅಭಿಮಾನಿಗಳತ್ತ ಬ್ಯಾಟ್ ತೋರಿಸಿ ಸಂಭ್ರಮಿಸಿದ ಜಡೇಜ
ಸಂಭ್ರಮದಲ್ಲಿ ಹಾರ್ದಿಕ್
ವಿಕೆಟ್‌ನೊಂದಿಗೆ ರೋಹಿತ್ ಶರ್ಮಾ ಕಾಣಿಸಿದ್ದು ಹೀಗೆ..
ಗೆಲುವಿನ ಖುಷಿಯಲ್ಲಿ ನಗೆ ಬೀರಿದ ಕೊಹ್ಲಿ
25 ವರ್ಷಗಳ ಹಿಂದೆ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಅನುಭವಿಸಿದ್ದ ಸೋಲಿಗೂ ಸೇಡು ತೀರಿಸಿಕೊಂಡಿತು.
ಪತ್ನಿ ಅನುಷ್ಕಾ ಶರ್ಮಾರೊಂದಿಗೆ ವಿರಾಟ್ ಕೊಹ್ಲಿ ಗೆಲುವನ್ನು ಸಂಭ್ರಮಿಸಿದ್ದು ಹೀಗೆ...
ಟ್ರೋಫಿ ಹಿಡಿದು ಕ್ಯಾಮೆರಾಗೆ ಫೋಸ್ ಕೊಟ್ಟ ರೋಹಿತ್
ದೆಹಲಿಯ ರಸ್ತೆಯಲ್ಲಿ ಭಾರತದ ತ್ರಿವರ್ಣ ಧ್ವಜ ರಾರಾಜಿಸಿತು.
ಅಭಿಮಾನಿಗಳ ಸಂಭ್ರಮ
ಇಂಡಿಯಾ ಗೇಟ್ ಮೇಲೆ ಭಾರತದ ತ್ರಿವರ್ಣ ಧ್ವಜ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.