ADVERTISEMENT

Champions Trophy: ಖಾಲಿ ಕ್ರೀಡಾಂಗಣ; ಪ್ರೇಕ್ಷಕರು ಎಲ್ಲಿ? ಮೈಕಲ್ ವಾನ್ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಫೆಬ್ರುವರಿ 2025, 13:36 IST
Last Updated 19 ಫೆಬ್ರುವರಿ 2025, 13:36 IST
<div class="paragraphs"><p>ಪಾಕಿಸ್ತಾನ vs ನ್ಯೂಜಿಲೆಂಡ್&nbsp;</p></div>

ಪಾಕಿಸ್ತಾನ vs ನ್ಯೂಜಿಲೆಂಡ್ 

   

(ರಾಯಿಟರ್ಸ್ ಚಿತ್ರ)

ಕರಾಚಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಗೆ ಇಂದು ಅಧಿಕೃತವಾಗಿ ಚಾಲನೆ ದೊರಕಿದೆ. ಕರಾಚಿಯ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ತಂಡದ ಸವಾಲನ್ನು ಎದುರಿಸುತ್ತಿದೆ.

ADVERTISEMENT

ಆ ಮೂಲಕ ಸುಮಾರು 26 ವರ್ಷಗಳ ಬಳಿಕ ಐಸಿಸಿ ಕ್ರಿಕೆಟ್ ಟೂರ್ನಿ ಪಾಕಿಸ್ತಾನಕ್ಕೆ ಮರಳಿದೆ. ಆದರೆ ಖಾಲಿ ಕ್ರೀಡಾಂಗಣ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಮುಜುಗರವನ್ನುಂಟು ಮಾಡಿದೆ.

ಈ ಕುರಿತು ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ ಪ್ರಶ್ನೆ ಎತ್ತಿದ್ದಾರೆ.

'ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆಡುತ್ತಿರುವುದು ಉತ್ತಮವಾದ ವಿಚಾರ. 1996ರ ಬಳಿಕ ಪಾಕಿಸ್ತಾನದಲ್ಲಿ ಪ್ರಮುಖ ಟೂರ್ನಿ ಆಯೋಜನೆಯಾಗುತ್ತಿದೆ. ಆದರೆ ಈ ಕುರಿತು ಸ್ಥಳೀಯರಿಗೆ ಮಾಹಿತಿ ನೀಡಲು ಮರೆತಿದ್ದಾರೆಯೇ? ಪ್ರೇಕ್ಷಕರು ಎಲ್ಲಿ?' ಎಂದು ಪ್ರಶ್ನಿಸಿದ್ದಾರೆ.

ಪ್ರೇಕ್ಷಕರ ಕಡಿಮೆ ಸಂಖ್ಯೆಯಲ್ಲಿ ಹಾಜರಾಗಿರುವುದರ ಕುರಿತಾಗಿ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.