ADVERTISEMENT

ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್‌ಗೆ ಕೋವಿಡ್–19 ನೆಗೆಟಿವ್

ಏಜೆನ್ಸೀಸ್
Published 25 ಆಗಸ್ಟ್ 2020, 13:43 IST
Last Updated 25 ಆಗಸ್ಟ್ 2020, 13:43 IST
ವೆಸ್ಟ್‌ ಇಂಡೀಸ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್‌
ವೆಸ್ಟ್‌ ಇಂಡೀಸ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್‌   

ಕಿಂಗ್ಸ್‌ಟನ್‌ (ಜಮೈಕಾ): ವೆಸ್ಟ್‌ ಇಂಡೀಸ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್‌ ಅವರಿಗೆ ಕೋವಿಡ್–19 ಮಾದರಿ ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ ಬಂದಿದೆ. ಇದರಿಂದಾಗಿ ಅವರು ಈ ಬಾರಿ ಯುಎಇಯಲ್ಲಿ ನಡೆಯಲಿರುವ ಐಪಿಎಲ್‌ ಟೂರ್ನಿಯಲ್ಲಿ ಆಡುವುದು ಖಚಿತವಾಗಿದೆ.

‘ಕೆಲದಿನಗಳ ಹಿಂದೆ. ಮೊದಲ ಕೋವಿಡ್–19 ಟೆಸ್ಟ್‌. ನಾನು ಪ್ರಯಾಣ ಆರಂಭಿಸುವ ಮೊದಲು ಎರಡು ನೆಗೆಟಿವ್ ವರದಿ ಬೇಕು’ ಎಂದು ಅವರು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಕೋವಿಡ್–19 ವರದಿ ನೆಗೆಟಿವ್‌ ಆಗಿದೆ ಎಂದು ಇನ್ನೊಂದು ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಗೇಲ್‌ ಅವರು ಇತ್ತೀಚೆಗೆವೇಗದ ಓಟಗಾರ ಉಸೇನ್‌ ಬೋಲ್ಟ್‌ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಬೋಲ್ಟ್‌ ಅವರು ತಾವು ಸದ್ಯ ಮನೆಯಲ್ಲಿಯೇ ಪ್ರತ್ಯೇಕವಾಸದಲ್ಲಿ ಇರುವುದಾಗಿ ಮತ್ತು ಕೋವಿಡ್‌–19 ಪರೀಕ್ಷೆ ವರದಿ ಬರುವುದಕ್ಕಾಗಿ ಕಾಯುತ್ತಿರುವುದಾಗಿ ಟ್ವಿಟರ್‌ನಲ್ಲಿ‌ ಸೋಮವಾರ ವಿಡಿಯೊವೊಂದನ್ನು ಪ್ರಕಟಿಸಿದ್ದರು.

ಈ ಬಾರಿ ಐಪಿಎಲ್‌ ಟೂರ್ನಿಯು ಯುಎಇಯಲ್ಲಿ ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರ ವರೆಗೆ ನಡೆಯಲಿದೆ. ಎಲ್ಲ ಎಂಟೂ ತಂಡಗಳು ಟೂರ್ನಿಯಲ್ಲಿ ಆಡಲಿವೆ. ಗೇಲ್‌ ಅವರು ಕಿಂಗ್ಸ್ ಇಲವೆನ್‌ ಪಂಜಾಬ್‌ ತಂಡದಲ್ಲಿ ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.