
ಕ್ರಿಕೆಟ್ (ಪ್ರಾತಿನಿಧಿಕ ಚಿತ್ರ)
ಮೈಸೂರು: ರಾಹುಲ್ ಪ್ರಧಾನ್ (ಔಟಾಗದೆ 107 ರನ್, 217 ಎಸೆತ, 4x7, 6x1) ಅವರ ಸೊಗಸಾದ ಶತಕದ ಬಲದಿಂದ ಛತ್ತೀಸಗಢ ತಂಡವು, ಇಲ್ಲಿ ನಡೆಯುತ್ತಿರುವ ಕರ್ನಲ್ ಸಿ.ಕೆ.ನಾಯ್ದು ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ವಿರುದ್ಧ ಮಂಗಳವಾರ 364 ರನ್‌ಗಳ ಮುನ್ನಡೆ ಸಾಧಿಸಿತು.
ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಆತಿಥೇಯ ತಂಡದ ಧನುಷ್ ಗೌಡ (30ಕ್ಕೆ 3) ಅವರ ದಾಳಿಗೆ ತತ್ತರಿಸಿದ ತಂಡಕ್ಕೆ ರಾಹುಲ್ ಆಸರೆಯಾದರು. ನಾಯಕ ದೀಪಕ್ ಯಾದವ್ (75 ರನ್, 130 ಎಸೆತ, 4x4) ಹಾಗೂ ಪ್ರಥಮ್ ಜಾಛಕ್ (43 ರನ್, 51 ಎಸೆತ, 4x2, 6x3) ಅವರೊಂದಿಗೆ ತಂಡಕ್ಕೆ ಬಲ ತುಂಬಿದರು.
ದೀಪಕ್ ಜೊತೆಗೆ 137 ರನ್ ಹಾಗೂ ಪ್ರಥಮ್ ಅವರ ಜೊತೆ 68 ರನ್ ಜೊತೆಯಾಟದಲ್ಲಿ ರಾಹುಲ್ ಪಾಲ್ಗೊಂಡರು. ಮೂರನೇ ದಿನದಾಟದ ಅಂತ್ಯಕ್ಕೆ ಛತ್ತೀಸಗಢ ತಂಡವು ಎರಡನೇ ಇನಿಂಗ್ಸ್‌ನಲ್ಲಿ 94.5 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 273 ರನ್‌ಗಳಿಸಿದೆ.
ಸಂಕ್ಷಿಪ್ತ ಸ್ಕೋರು: ಮೊದಲ ಇನ್ನಿಂಗ್ಸ್: ಛತ್ತೀಸಗಢ 303. ಕರ್ನಾಟಕ 212. 2ನೇ ಇನ್ನಿಂಗ್ಸ್: ಛತ್ತೀಸಗಢ 94.5 ಓವರ್‌ಗಳಲ್ಲಿ 7 ವಿಕೆಟ್‌ಗೆ 273 (ರಾಹುಲ್ ಪ್ರಧಾನ್ ಔಟಾಗದೆ 107 ರನ್, ಧನುಷ್ ಗೌಡ 30ಕ್ಕೆ3)