ADVERTISEMENT

ಸಿ.ಕೆ.ನಾಯ್ಡು ಟ್ರೋಫಿ: ಹೈದರಾಬಾದ್ ವಿರುದ್ಧ ಕರ್ನಾಟಕಕ್ಕೆ ಇನಿಂಗ್ಸ್‌ ಜಯ

ಕ್ರಿಕೆಟ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 16:34 IST
Last Updated 14 ಡಿಸೆಂಬರ್ 2019, 16:34 IST
ಪಂದ್ಯ ಗೆದ್ದ ನಂತರ ಕೋಚ್‌ ಅಯ್ಯಪ್ಪ ಆಟಗಾರರೊಂದಿಗೆ ಸೆಲ್ಫಿ ತೆಗೆದುಕೊಂಡರು
ಪಂದ್ಯ ಗೆದ್ದ ನಂತರ ಕೋಚ್‌ ಅಯ್ಯಪ್ಪ ಆಟಗಾರರೊಂದಿಗೆ ಸೆಲ್ಫಿ ತೆಗೆದುಕೊಂಡರು   

ಶಿವಮೊಗ್ಗ: ಕರ್ನಾಟಕದ ವೇಗ ಮತ್ತು ಸ್ಪಿನ್‌ ದಾಳಿಗೆ ಸಿಲುಕಿದ ಹೈದರಾಬಾದ್‌ 142 ರನ್‌ಗಳಿಗೆ ಕುಸಿಯಿತು. ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ (23 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿಯ ನಾಲ್ಕು ದಿನಗಳ ಪಂದ್ಯವನ್ನು ಕರ್ನಾಟಕ ಅಂತಿಮ ದಿನವಾದ ಶನಿವಾರ ಇನಿಂಗ್ಸ್‌ 66 ರನ್‌ಗಳಿಂದ ಗೆದ್ದುಕೊಂಡಿತು.

ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ, 3 ವಿಕೆಟ್‌ಗೆ 71 ರನ್‌ಗಳೊಡನೆ ಎರಡನೇ ಇನಿಂಗ್ಸ್‌ ಮುಂದುವರಿಸಿದ ಹೈದರಾಬಾದ್‌ 142 ರನ್‌ಗಳಿಗೆ ಕುಸಿಯಿತು.‌ಕರ್ನಾಟಕ 208 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಪಡೆದಿತ್ತು.

ಆಲ್‌ರೌಂಡರ್‌ ಅಜಯ್‌ ದೇವ್‌ ಗೌಡ ಅಜೇಯ 44 ರನ್‌ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಪ್ರತಿರೋಧ ಎದುರಾಗಲಿಲ್ಲ. ಮಧ್ಯಮ ವೇಗದ ಬೌಲರ್‌ ಸಂತೋಖ್‌ ಸಿಂಗ್‌ 33 ರನ್ನಿಗೆ 3 ವಿಕೆಟ್‌ ಪಡೆದರೆ, ಆಫ್ ಸ್ಪಿನ್ನರ್‌ ಅಭಿಷೇಕ್‌ ಅಹ್ಲಾವಟ್‌ 26 ರನ್ನಿಗೆ3 ವಿಕೆಟ್‌ ಪಡೆದರು. ಎಡಗೈ ಸ್ಪಿನ್ನರ್‌ ಪ್ರಣವ್ ಭಾಟಿಯಾ ಎರಡು ವಿಕೆಟ್‌ ಪಡೆದರು.

ADVERTISEMENT

ಸ್ಕೋರುಗಳು
ಹೈದರಾಬಾದ್‌: 202 ಮತ್ತು 63.1 ಓವರುಗಳಲ್ಲಿ 142
(ಬುದ್ಧಿ ರಾಹುಲ್‌ 26, ಅಜಯ್‌ ದೇವ್‌ ಗೌಡ್‌ ಔಟಾಗದೇ 44; ಅಭಿಲಾಷ್‌ ಶೆಟ್ಟಿ 21ಕ್ಕೆ2, ಸಂತೋಖ್‌ ಸಿಂಗ್‌ 33ಕ್ಕೆ3, ಅಭಿಷೇಕ್‌ ಅಹ್ಲಾವಟ್‌ 26ಕ್ಕೆ3, ಪ್ರಣವ್‌ ಭಾಟಿಯಾ 19ಕ್ಕೆ2)
ಕರ್ನಾಟಕ ಮೊದಲ ಇನಿಂಗ್ಸ್‌410

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.