ADVERTISEMENT

ಕ್ರಿಕೆಟರ್‌ ರಿಂಕು ಸಿಂಗ್ ವರಿಸಲಿರುವ ಸಂಸದೆ ಪ್ರಿಯಾ ಸರೋಜ್: ಖಚಿತಪಡಿಸಿದ ಕುಟುಂಬ

ಪಿಟಿಐ
Published 20 ಜನವರಿ 2025, 9:34 IST
Last Updated 20 ಜನವರಿ 2025, 9:34 IST
<div class="paragraphs"><p>ರಿಂಕು ಸಿಂಗ್ ಹಾಗೂ ಪ್ರಿಯಾ ಸರೋಜ್</p></div>

ರಿಂಕು ಸಿಂಗ್ ಹಾಗೂ ಪ್ರಿಯಾ ಸರೋಜ್

   

ಜೌನ್ಪುರ: ಭಾರತ ಕ್ರಿಕೆಟ್ ತಂಡದ ಆಟಗಾರ ರಿಂಕು ಸಿಂಗ್‌ ಅವರು ಸಮಾಜವಾದಿ ಪಕ್ಷದ ಯುವ ಸಂಸದೆ ಪ್ರಿಯಾ ಸರೋಜ್ ಅವರನ್ನು ವರಿಸಲಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಪ್ರಿಯಾ ಸರೋಜ್ ಅವರ ತಂದೆ ಸಮಾಜವಾದಿ ಪಕ್ಷದ ಶಾಸಕ ತೂಫಾನಿ ಸರೋಜ್ ಅವರು ಈ ವಿಷಯವನ್ನು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. 

ADVERTISEMENT

‘ಎರಡೂ ಕುಟುಂಬಗಳು ಈ ಸಂಬಂಧ ಕುರಿತು ಮಾತುಕತೆ ಪೂರ್ಣಗೊಳಿಸಿವೆ. ರಿಂಕು ಸಿಂಗ್ ಅವರ ಪಾಲಕರನ್ನು ಜ. 16ರಂದು ಅಲಿಘಡದಲ್ಲಿರುವ ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ. ಆದರೆ ನಿಶ್ಚಿತಾರ್ಯ ಮತ್ತು ಮದುವೆ ಕಾರ್ಯಕ್ರಮಗಳ ದಿನಾಂಕ ನಿಗದಿ ಇನ್ನಷ್ಟೇ ಆಗಬೇಕಿದೆ’ ಎಂದು ತಿಳಿಸಿದ್ದಾರೆ.

‘ಕಳೆದ ಒಂದು ವರ್ಷದಿಂದ ರಿಂಕು ಹಾಗೂ ಪ್ರಿಯಾ ಪರಸ್ಪರ ಪರಿಚಿತರಾಗಿ, ಮೆಚ್ಚಿದ್ದರು. ಈ ಸಂಬಂಧಕ್ಕೆ ಎರಡೂ ಕುಟುಂಬಗಳ ಹಿರಿಯರ ಒಪ್ಪಿಗೆ ಬೇಕಿತ್ತು. ಇದೀಗ ಎರಡೂ ಕುಟುಂಬಗಳು ಒಪ್ಪಿವೆ’ ಎಂದು ಮೂರು ಬಾರಿ ಸಂಸದರಾಗಿರುವ ತೂಫಾನಿ ಸಿಂಗ್ ತಿಳಿಸಿದ್ದಾರೆ.

‘ಪ್ರಿಯಾ ಅವರ ಸ್ನೇಹಿತೆಯ ತಂದೆಯೂ ಕ್ರಿಕೆಟರ್‌ ಆಗಿದ್ದಾರೆ. ಅವರ ಮೂಲಕ ಪ್ರಿಯಾಗೆ ರಿಂಕು ಅವರ ಪರಿಚಯವಾಗಿದೆ. ಈ ಇಬ್ಬರ ನಿಶ್ಚಿತಾರ್ಯ ಹಾಗೂ ಇನ್ನಿತರ ವಿವಾಹ ಸಂಬಂಧಿತ ಕಾರ್ಯಕ್ರಮಗಳು ಸಂಸತ್ ಅಧಿವೇಶನದ ನಂತರ ನಿರ್ಧಾರವಾಗಲಿವೆ. ನಿಶ್ಚಿತಾರ್ಥವನ್ನು ಲಖನೌನದಲ್ಲಿ ನಡೆಸಲು ಎರಡೂ ಕುಟುಂಬಗಳು ನಿರ್ಧರಿಸಿವೆ’ ಎಂದು ತಿಳಿಸಿದ್ದಾರೆ.

‘ಜ. 22ರಿಂದ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಟಿ20 ಸರಣಿಯಲ್ಲಿ ರಿಂಕು ಸಿಂಗ್ ಆಡಲಿದ್ದಾರೆ. ಇದಾದ ನಂತರ ಐಪಿಎಲ್‌ ಸರಣಿಯಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಹೀಗಾಗಿ ಈ ಮದುವೆ ಕಾರ್ಯಕ್ರಮಕ್ಕೆ ತೊಡಕಾಗದಂತೆ ವಿವಾಹ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ತೂಫಾನಿ ಸಿಂಗ್‌ ತಿಳಿಸಿದ್ದಾರೆ.

ಪ್ರಿಯಾ ಸರೋಜ್ ಅವರು ವಾರಾಣಸಿಯ ಕಾರ್ಖಿಯೊ ಗ್ರಾಮದ ನಿವಾಸಿಯಾಗಿದ್ದಾರೆ. ಸಮಾಜವಾದಿ ಪಕ್ಷದ ಸದಸ್ಯೆಯಾಗಿರುವ ಅವರು, ಜೌನ್ಪುರ ಜಿಲ್ಲೆಯ ಮಚ್ಲಿಶಹರ್‌ ಕ್ಷೇತ್ರದಿಂದ 25ನೇ ವಯಸ್ಸಿಗೆ ಸ್ಪರ್ಧಿಸಿ ಸಂಸದೆಯಾಗಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಹಾಗೂ ನೊಯಿಡಾದ ಅಮಿಟಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರುವ ಪ್ರಿಯಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಕೆಲ ಕಾಲ ವಕೀಲರಾಗಿದ್ದರು. 2022ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಂದೆಯ ಪರ ಪ್ರಚಾರದಲ್ಲಿ ಭಾಗವಹಿಸುವ ಮೂಲಕ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.