ADVERTISEMENT

IPL 2023: ಚೆನ್ನೈ ತಂಡಕ್ಕೆ ಧೋನಿಯೇ ನಾಯಕ

ಐಎಎನ್ಎಸ್
Published 16 ನವೆಂಬರ್ 2022, 11:11 IST
Last Updated 16 ನವೆಂಬರ್ 2022, 11:11 IST
ರವೀಂದ್ರ ಜಡೇಜ ಹಾಗೂ ಮಹೇಂದ್ರ ಸಿಂಗ್ ಧೋನಿ
ರವೀಂದ್ರ ಜಡೇಜ ಹಾಗೂ ಮಹೇಂದ್ರ ಸಿಂಗ್ ಧೋನಿ   

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ನೇ ಸಾಲಿನಲ್ಲೂ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು ಮಹೇಂದ್ರ ಸಿಂಗ್ ಧೋನಿ ಅವರೇ ಮುನ್ನಡೆಸಲಿದ್ದಾರೆ.

ಈ ವಿಚಾರವನ್ನು ಸಿಎಸ್‌ಕೆ ಫ್ರಾಂಚೈಸಿಯ ಸಿಇಒ ಕೆ.ಎಸ್. ವಿಶ್ವನಾಥನ್ ಖಚಿತಪಡಿಸಿದ್ದಾರೆ.

ಧೋನಿಯ ಮುಂದಾಳತ್ವದಲ್ಲಿ ಸಿಎಸ್‌ಕೆ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.

ADVERTISEMENT

ಐಪಿಎಲ್ ಹರಾಜಿಗೂ ಮುನ್ನ ಎಲ್ಲ ಫ್ರಾಂಚೈಸಿಗಳು ತನ್ನ ಬಳಿ ಉಳಿಸಿಕೊಂಡಿರುವ ಆಟಗಾರರು ಹಾಗೂ ಬಿಡುಗಡೆಗೊಳಿಸಿದ ಆಟಗಾರರ ಪಟ್ಟಿಯನ್ನು ಬಹಿರಂಗಗೊಳಿಸಿದೆ.

ಐಪಿಎಲ್ ೀಮಿನಿ ಹರಾಜು ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿದೆ.

ಸಿಎಸ್‌ಕೆ ತಂಡವು ಡ್ವೇನ್ ಬ್ರಾವೋ, ಆ್ಯಡಂ ಮಿಲ್ನೆ, ಕ್ರಿಸ್ ಜಾರ್ಡನ್, ಎನ್. ಜಗದೀಶನ್, ಸಿ. ಹರಿ ನಿಶಾಂತ್, ಕೆ. ಭಗತ್ ವರ್ಮಾ, ಕೆ.ಎಂ. ಆಸಿಫ್ ಮತ್ತು ರಾಬಿನ್ ಉತ್ತಪ್ಪರನ್ನು ಕೈಬಿಟ್ಟಿದೆ.

ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡವು 2010, 2011, 2018 ಹಾಗೂ 2021ನೇ ಸಾಲಿನಲ್ಲಿ ಐಪಿಎಲ್ ಟ್ರೋಫಿ ಜಯಿಸಿತ್ತು. ಅಲ್ಲದೆ 2010 ಹಾಗೂ 2014ರಲ್ಲಿ ಚಾಂಪಿಯನ್ಸ್ ಲೀಗ್ ಟ್ರೋಫಿ ಕೂಡ ಗೆದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.