ADVERTISEMENT

WPL 2026: ಮತ್ತೆ ಫೈನಲ್ ತಲುಪಿದ ಡೆಲ್ಲಿ; ಪ್ರಶಸ್ತಿಗಾಗಿ ಸ್ನೇಹಿತೆಯರ ಸವಾಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಫೆಬ್ರುವರಿ 2026, 17:21 IST
Last Updated 3 ಫೆಬ್ರುವರಿ 2026, 17:21 IST
<div class="paragraphs"><p>ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ್ತಿಯರು</p></div>

ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ್ತಿಯರು

   

ಕೃಪೆ: @DelhiCapitals

ವಡೋದರ: ಗುಜರಾತ್‌ ಜೈಂಟ್ಸ್‌ ವಿರುದ್ಧದ ಎಲಿಮಿನೇಟರ್‌ ಪಂದ್ಯದಲ್ಲಿ 7 ವಿಕೆಟ್‌ ಅಂತರದ ಜಯ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ಪಡೆ, ಮಹಿಳಾ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯ ಸತತ ನಾಲ್ಕನೇ ಆವೃತ್ತಿಯಲ್ಲೂ ಫೈನಲ್‌ ತಲುಪಿದ ಸಾಧನೆ ಮಾಡಿತು.

ADVERTISEMENT

ವಡೋದರದ ಕೊತಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್, ಅನುಭವಿ ಬೆತ್‌ ಮೂನಿ (62) ಗಳಿಸಿದ ಅಜೇಯ ಅರ್ಧಶತಕದ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 168 ರನ್‌ ಗಳಿಸಿತ್ತು. ಈ ಗುರಿ, ಡೆಲ್ಲಿಗೆ ಸವಾಲೇ ಆಗಲಿಲ್ಲ.

ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ಲಿಜೆಲ್ಲೆ ಲೀ (43), ಶಫಾಲಿ ವರ್ಮಾ (31), ಲೌರಾ ವೊಲ್ವಾರ್ಡ್ತ್‌ ಹಾಗೂ ನಾಯಕಿ ಜೆಮಿಮಾ ರಾಡ್ರಿಗಸ್‌ (41) ಬೀಸಾಟದ ಮೂಲಕ ಗುಜರಾತ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.

ಹೀಗಾಗಿ, ಡೆಲ್ಲಿ ಪಡೆ ಕೇವಲ 15.4 ಓವರ್‌ಗಳಲ್ಲೇ ಕೇವಲ 3 ವಿಕೆಟ್‌ ಕಳೆದುಕೊಂಡು 169 ರನ್‌ ಗಳಿಸಿತು.

ನಾಲ್ಕನೇ ಫೈನಲ್‌; ಸ್ನೇಹಿತೆಯರ ಸವಾಲ್

ಗುಜರಾತ್ ಮಣಿಸಿ, ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿರುವ ಡೆಲ್ಲಿ ಪಡೆಗೆ ಇದು ಸತತ ನಾಲ್ಕನೇ ಫೈನಲ್‌. ಈ ತಂಡ ಹಿಂದಿನ ಮೂರು ಆವೃತ್ತಿಗಳಲ್ಲಿಯೂ ಅಂತಿಮ ಹಂತ ತಲುಪಿತ್ತು. ಆದರೆ, ಒಮ್ಮೆಯೂ ಟ್ರೋಫಿ ಮುಡಿಗೇರಿಸಿಕೊಂಡಿಲ್ಲ.

ಮೊದಲ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಜೆಮಿಮಾ ಪಡೆಗೆ, ಸ್ನೇಹಿತೆ ಸ್ಮೃತಿ ಮಂದಾನ ನಾಯಕಿಯಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸವಾಲೊಡ್ಡಲಿದೆ.

ಇದೇ ಕ್ರೀಡಾಂಗಣದಲ್ಲಿ ಫೆಬ್ರುವರಿ 5ರಂದು ಫೈನಲ್‌ನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.