ADVERTISEMENT

ILT20: ಶಾರ್ಜಾ ವಾರಿಯರ್ಸ್ ತಂಡ ಸೇರಿಕೊಂಡ ದಿನೇಶ್ ಕಾರ್ತಿಕ್

ಪಿಟಿಐ
Published 30 ಸೆಪ್ಟೆಂಬರ್ 2025, 10:07 IST
Last Updated 30 ಸೆಪ್ಟೆಂಬರ್ 2025, 10:07 IST
ದಿನೇಶ್ ಕಾರ್ತಿಕ್ 
ದಿನೇಶ್ ಕಾರ್ತಿಕ್    

ಶಾರ್ಜಾ: ಭಾರತ ಕ್ರಿಕೆಟ್ ತಂಡ, ಐಪಿಎಲ್‌ನ ಆರ್‌ಸಿಬಿಯ ಮಾಜಿ ಆಟಗಾರ, ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅವರು ಇಂಟರ್‌ನ್ಯಾಷನಲ್ ಲೀಗ್ ಟಿ20ಯಲ್ಲಿ(ಐಎಲ್‌ಟಿ20) ಆಡಲು ಶಾರ್ಜಾ ವಾರಿಯರ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಶ್ರೀಲಂಕಾದ ಬ್ಯಾಟರ್ ಕುಸಲ್ ಮೆಂಡೀಸ್ ಅವರ ಬದಲಿಗೆ ದಿನೇಶ್ ಕಾರ್ತಿಕ್ ಅವರನ್ನುತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ದಕ್ಷಿಣ ಆಫ್ರಿಕಾದ ಜೆ.ಪಿ. ಡುಮಿನಿ ತಂಡದ ಕೋಚ್ ಆಗಿದ್ದಾರೆ.

ಡಿಪಿ ವರ್ಲ್ಡ್ ಐಎಲ್‌ಟಿ20 ಟೂರ್ನಮೆಂಟ್‌ಗಾಗಿ ಶಾರ್ಜಾ ವಾರಿಯರ್ಸ್ ತಂಡವನ್ನು ಸೇರಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಅದು ಯುವಕರಿಂದ ಕೂಡಿದ ತಂಡ ಎಂದು ನನಗೆ ತಿಳಿದಿದೆ. ಕೆಲವು ವಿಶೇಷ ಸಾಧನೆ ಮಾಡಲು ಆಸಕ್ತರಾಗಿದ್ದಾರೆ. ನಾನು ಅವರ ಜೊತೆ ಇರುವುದಕ್ಕೆ ಸಂತೋಷಪಡುತ್ತೇನೆ ಎಂದು ದಿನೇಶ್ ತಿಳಿಸಿದ್ದಾರೆ.

ADVERTISEMENT

ಶಾರ್ಜಾ ಕ್ರೀಡಾಂಗಣವು ಐಕಾನಿಕ್ ಕ್ರೀಡಾಂಗಣಗಳಲ್ಲಿ ಒಂದಾಗಿದೆ. ಶಾರ್ಜಾ ವಾರಿಯರ್ಸ್‌ ತಂಡದ ಭಾಗವಾಗುವುದು ಕನಸನ್ನು ನನಸಾಗಿಸುತ್ತದೆ ಎಂದು ಕಾರ್ತಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐಪಿಎಲ್ 2025ರ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬ್ಯಾಟಿಂಗ್ ಕೋಚ್ ಆಗಿ ಕಾರ್ತಿಕ್ ಕೆಲಸ ಮಾಡಿದ್ದರು.

ಶಾರ್ಜಾ ವಾರಿಯರ್ಸ್‌ನಲ್ಲಿ ಆರ್‌ಸಿಬಿಯ ಟಿಮ್ ಡೇವಿಡ್ ಸಹ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.