ADVERTISEMENT

IPL 2025: ಉದ್ಘಾಟನಾ ಸಮಾರಂಭದಲ್ಲಿ ರಂಗೇರಿಸಲಿರುವ ದಿಶಾ ಪಟಾನಿ,ಶ್ರೇಯಾ ಘೋಶಾಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಮಾರ್ಚ್ 2025, 14:22 IST
Last Updated 19 ಮಾರ್ಚ್ 2025, 14:22 IST
   

ಕೋಲ್ಕತ್ತ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 18ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಇದೇ 22 ರಂದು ಕೋಲ್ಕತ್ತದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತ ನೈಟ್ ರೈಟರ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಈ ಭಾರಿಯ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್‌ನ ಗ್ಲಾಮರಸ್ ನಟಿ ದಿಶಾ ಪಟಾನಿ ತಮ್ಮ ನೃತ್ಯದ ಮೂಲಕ ಸಮಾರಂಭಕ್ಕೆ ಮೆರುಗು ನೀಡಲಿದ್ದಾರೆ. ಇವರ ಜೊತೆಗೆ ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಶಾಲ್ ಸಂಗೀತ ಸುಧೆ ಹರಿಸಲಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಕುರಿತ ಮಾಹಿತಿ ಹಂಚಿಕೊಳ್ಳಲಾಗಿದ್ದು, ‘ಐಪಿಎಲ್‌ಗೆ 18 ವರ್ಷಗಳು ತುಂಬಿದ್ದು, ಹಿಂದೆಂದೂ ಕಾಣದ ಅದ್ಭುತ ಪ್ರದರ್ಶನವನ್ನು ಬಯಸುತ್ತದೆ! ವೇದಿಕೆಯನ್ನು ಬೆಳಗಿಸಲು ದಿಶಾ ಪಟಾನಿಗಿಂತ ಉತ್ತಮರು ಯಾರು? ರೋಮಾಂಚಕ ಉದ್ಘಾಟನಾ ಸಮಾರಂಭವನ್ನು ಮಿಸ್ ಮಾಡಿಸಿಕೊಳ್ಳಬೇಡಿ’ ಎಂದು ಬರೆಯಲಾಗಿದೆ.

ADVERTISEMENT

ಇದಲ್ಲದೆ, ಗಾಯಕ ಕರಣ್ ಔಜ್ಲಾ ಕೂಡ ಈ ಅದ್ಧೂರಿ ಸಮಾರಂಭದಲ್ಲಿ ಪ್ರದರ್ಶನ ನೀಡುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ಕಳೆದ ಋತುವಿನಲ್ಲಿ, ನಟರಾದ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಮತ್ತು ಗಾಯಕರಾದ ಸೋನು ನಿಗಮ್ ಮತ್ತು ಎ.ಆರ್. ರೆಹಮಾನ್ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಿದ್ದರು.

ಈ ಮಧ್ಯೆ, ಕ್ರಿಕೆಟ್ ಅಭಿಮಾನಿಗಳು ಕೆಲವು ಪ್ಲಾನ್‌ಗಳೊಂದಿಗೆ ಜಿಯೋಹಾಟ್‌ಸ್ಟಾರ್‌ನಲ್ಲಿ ಐಪಿಎಲ್ ಅನ್ನು ಉಚಿತವಾಗಿ ವೀಕ್ಷಿಸಬಹುದು ಎಂದು ರಿಲಯನ್ಸ್ ಜಿಯೊ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.