ನವದೆಹಲಿ: ಆಂಧ್ರಪ್ರದೇಶ ಕ್ರಿಕೆಟ್ ತಂಡದ ಬ್ಯಾಟರ್ ಹನುಮವಿಹಾರಿ ಅವರು ಮುಂಬರುವ ದೇಶಿ ಕ್ರಿಕೆಟ್ ಋತುವಿನಲ್ಲಿ ತ್ರಿಪುರ ತಂಡದಲ್ಲಿ ಆಡಲಿದ್ದಾರೆ.
2021ರಲ್ಲಿ ಆಸ್ಟ್ರೇಲಿಯಾದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಅವರ ವಿರೋಚಿತ ಬ್ಯಾಟಿಂಗ್ ಸ್ಮರಣಾರ್ಹವಾಗಿದೆ. 2019ರಲ್ಲಿ ಅವರು ವೆಸ್ಟ್ ಇಂಡೀಸ್ ಎದುರಿನ ಸರಣಿಯಲ್ಲಿ 289 ರನ್‌ಗಳನ್ನು ಗಳಿಸಿದ್ದರು. ಭಾರತದ ಟೆಸ್ಟ್ ಕ್ರಿಕೆಟ್ ಬ್ಯಾಟಿಂಗ್ ಪರಿಣತರಲ್ಲಿ ಹನುಮ ಕೂಡ ಒಬ್ಬರು. 2022ರಲ್ಲಿ ಕೊನೆಯ ಬಾರಿ ಅವರು ಭಾರತ ತಂಡದಲ್ಲಿ ಆಡಿದ್ದರು.
‘ಮೂರು ಮಾದರಿಗಳಲ್ಲಿಯೂ ಆಡಬೇಕೆಂಬ ಕಾರಣಕ್ಕೆ ತ್ರಿಪುರ ತಂಡ ಸೇರುತ್ತಿರುವೆ. ಆಂಧ್ರ ತಂಡದಲ್ಲಿ ಇದು ಸಾಧ್ಯವಿಲ್ಲ’ ಎಂದು 31 ವರ್ಷದ ಹನುಮವಿಹಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.