ADVERTISEMENT

ಸಚಿನ್‌ರಿಂದ ಕೊಹ್ಲಿವರೆಗಿನ ಶ್ರೇಷ್ಠರನ್ನು ಹುರಿದುಂಬಿಸಿದ ದೇಶವಿದು: ಟ್ರಂಪ್

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 14:09 IST
Last Updated 24 ಫೆಬ್ರುವರಿ 2020, 14:09 IST
   

ಮೊಟೆರಾ:ಬ್ಯಾಟಿಂಗ್‌ ದಿಗ್ಗಜಸಚಿನ್‌ ತೆಂಡೂಲ್ಕರ್ ಸೇರಿದಂತೆ ಈಗಿನ ವಿರಾಟ್‌ ಕೊಹ್ಲಿಯವರೆಗಿನ ಎಲ್ಲ ಶ್ರೇಷ್ಠ ಆಟಗಾರರಿಗೆ ಪ್ರೋತ್ಸಾಹಿಸುತ್ತಿರುವದೇಶ ಭಾರತ ಎಂದುಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಎರಡುದಿನಗಳ ಭೇಟಿ ಸಲುವಾಗಿ ಭಾರತಕ್ಕೆ ಆಗಮಿಸಿರುವ ಅವರು ಗುಜರಾತ್‌ನಲ್ಲಿ ಮಾತನಾಡಿದರು.

‘ಸಚಿನ್‌ ತೆಂಡೂಲ್ಕರ್ ಅವರಿಂದ ಆರಂಭವಾಗಿ ಈಗಿನ ವಿರಾಟ್‌ ಕೊಹ್ಲಿವರೆಗಿನ ಶ್ರೇಷ್ಠ ಆಟಗಾರರನ್ನು ಹುರಿದುಂಬಿಸುತ್ತಿರುವದೇಶವಿದು. ಪ್ರತಿಭೆ ಮತ್ತು ಸೃಜನಶೀಲತೆಗೆ ಹೆಸರಾಗಿರುವ ಭಾಂಗ್ರಾ (ಸಾಂಪ್ರದಾಯಿಕ ಶೈಲಿಯ ಸಂಗೀತ) ಮತ್ತುಬಾಲಿವುಡ್‌ನ ಜಾಲವಿದು. ಡಿಡಿಎಲ್‌ಜೆ, ಶೋಲೆಯಂತಹಶ್ರೇಷ್ಠ ಸಿನಿಮಾಗಳನ್ನು ಖುಷಿಯಿಂದ ನೋಡುವ ದೊಡ್ಡವರ್ಗವೇ ಇಲ್ಲಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರತಿವರ್ಷವೂ ಸರಿಸುಮಾರು 2 ಸಾವಿರಕ್ಕಿಂತಲೂ ಹೆಚ್ಚು ಸಿನಿಮಾ ನಿರ್ಮಿಸುವ ಭಾರತದ ಚಿತ್ರೋದ್ಯಮದ ಸಾಮರ್ಥ್ಯದ ಬಗ್ಗೆಯೂ ಮಾತನಾಡಿದ ಟ್ರಂಪ್‌, ‘ಪ್ರತಿಭೆ ಮತ್ತು ಸೃಜನಶೀಲತೆಗೆ ಹೆಸರಾದ ಬಾಲಿವುಡ್‌ನಂತ ಸಿನಿಮೋದ್ಯಮ ಇರುವ ಈ ದೇಶದಲ್ಲಿ, ಪ್ರತಿವರ್ಷ ಹತ್ತಿರತ್ತಿರ 2 ಸಾವಿರ ಸಿನಿಮಾಗಳನ್ನು ನಿರ್ಮಿಸಲಾಗುತ್ತದೆ’ ಎಂದಿದ್ದಾರೆ.

ADVERTISEMENT

ಜಗತ್ತಿನ ಅತ್ಯಂತ ದೊಡ್ಡ ಕ್ರಿಕೆಟ್‌ ಮೈದಾನ ಎನಿಸಿರುವ ಇಲ್ಲಿನಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಕ್ರೀಡಾಂಗಣದಲ್ಲಿ ನಡೆದ ‘ನಮಸ್ತೆ ಟ್ರಂಪ್‌’ ಕಾರ್ಯಕ್ರಮದಲ್ಲಿಪ್ರಧಾನಿ ನರೇಂದ್ರ ಮೋದಿ ಹಾಗೂ ಟ್ರಂಪ್‌ಜನರನ್ನು ಉದ್ದೇಶಿಸಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.